ದೊಡ್ಡಬಳ್ಳಾಪುರ: ಬೆಳ್ಳಂ ಬೆಳಗ್ಗೆ ವಿಳಾಸ ಕೇಳುವ ನೆಪದಲ್ಲಿ ವೃದ್ದ ಮಹಿಳೆಯ ಚಿನ್ನದ ಸರ ಕದ್ದ ಕಳ್ಳರು ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ನಗರದಲ್ಲಿ 14 ನೇ ವಾರ್ಡ್ ನಲ್ಲಿ ನಡೆದಿದೆ.ಶಕುಂತಲಮ್ಮ ಚಿನ್ನದ ಸರ ಕಳೆದುಕೊಂಡ ವೃದ್ದ ಮಹಿಳೆ.
ದಿನನಿತ್ಯ ಮುಂಜಾನೆ ಶಕುಂತಲಮ್ಮ ಹಾಲು ಮತ್ತು ತರಕಾರಿ ತರಲು ಮಾರುಕಟ್ಟೆಗೆ ಬರುತ್ತಿದ್ದರು.ಅದೆ ರೀತಿ ಇಂದು ಮುಂಜಾನೆ ಪಕ್ಕದ ಬೀದಿಯಲ್ಲಿ ಹಾಲು ತೆಗೆದುಕೊಂಡು ಮನೆಯಲ್ಲಿ ಇಟ್ಟು, ತೇರಿನಬೀದಿ ವೆಂಕಟರಮಣಸ್ವಾಮಿ ದೇವಾಲಯದ ಬಳಿ ತಳ್ಳುವ ಗಾಡಿಯಲ್ಲಿ ತರಕಾರಿ ತೆಗೆದುಕೊಂಡು ಮನೆಯ ಹತ್ತಿರ ಬಂದಾಗ ವಿಳಾಸ ಕೇಳುವ ನೆಪದಲ್ಲಿ ಬಂದ ಕಳ್ಳರು ವೃದ್ದೆಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.
52 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಳ್ಳುವ ರಭಸದಲ್ಲಿ ಚಿನ್ನದ ಸರ ಅರ್ಧಕ್ಕೆ ತುಂಡು ಹಾಗಿದ್ದು , 10 ಗ್ರಾಂ ತೂಕದ ವೃದ್ದೆಯ ಕೈಯಲ್ಲಿ ಇದ್ದು,42 ಗ್ರಾಂ ತೂಕದ ಸರ ಕಳ್ಳನ ಕೈ ಸೇರಿದ್ದು ಬೈಕ್ ನಲ್ಲಿ ಕಾಲ್ಕಿತ್ತಿದ್ದಾರೆ..ಚಿನ್ನದ ಸರ ಕಿತ್ತ ರಭಸಕ್ಕೆ ವೃದ್ದೆ ಕೆಳಗೆ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ..ಇನ್ನೂ ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.