ಇತ್ತೀಚೆಗಷ್ಟೇ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ತೆರೆಗೆ ಬಂದಿದ್ದು ಬಾಕ್ಸ್ ಆಫೀಸ್ ನಲ್ಲಿ ಸೈಲೆಂಟ್ ಆಗಿ ಬಿಟ್ಟಿತ್ತು. ಚಿತ್ರ ತೆರೆಕಂಡ ವಾರದೊಳಗೆ ಥಿಯೇಟರ್ ನಿಂದ ಎತ್ತಂಗಡಿ ಮಾಡಲಾಗಿತ್ತು. ಈ ಮಧ್ಯೆ ಪ್ರಭಾಸ್ ನಟನೆಯ ಪ್ರಾಜೆಕ್ಟ್ ಕೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಅದು ಕೂಡ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಪ್ರಾಜೆಕ್ಟ್ ಕೆ ಸಿನಿಮಾ ತಂಡ ಬಿಲ್ಡ್ ಅಪ್ ಕೊಟ್ಟಂತೆ, ಅಚ್ಚರಿಯೊಂದು ಅಭಿಮಾನಿಗಳಿಗೆ ಕಾದಿದೆ ಎಂದೇ ಹೇಳಲಾಗಿತ್ತು. ಆದರೆ, ಯಾವುದೇ ಅಚ್ಚರಿ ಮೂಡಿಸದೇ ನಿರಾಸೆ ಮಾಡಿದೆ ಚಿತ್ರತಂಡ. ಪ್ರಭಾಸ್ ಅವರ ಮಾಮೂಲು ಲುಕ್ ಇರುವಂತಹ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಪ್ರಾಜೆಕ್ಟ್ ಕೆ ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಪ್ರಭಾಸ್ ಜೊತೆ ಕಮಲ್ ಹಾಸನ್, ರಾಣಾ ದಗ್ಗುಬಾಟಿ ಈಗಾಗಲೇ ಅಮೆರಿಕಾಗೆ ಪ್ರವಾಸ ಬೆಳೆಸಿದ್ದಾರೆ. ಸುಮಾರು 600 ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದ್ದು, ಅನೇಕ ದಿಗ್ಗಜ ಕಲಾವಿದರು ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ಇಷ್ಟೊಂದು ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾದ ಫಸ್ಟ್ ಲುಕ್ ಯಾವುದೇ ಡಿಫರೆಂಟ್ ಲುಕ್ ನಲ್ಲಿರದೆ ಮಾಮೂಲಿಯಂತಿರೋದು ಫ್ಯಾನ್ಸ್ ಗೆ ನಿರಾಸೆ ಮೂಡಿಸಿದೆ.