ಬೆಂಗಳೂರು: ಭಾರತೀಯ ಆಹಾರ ಮಂಡಳಿ (FCI) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿದ್ದು, ಜೂನ್ ತಿಂಗಳ ದಾನ್ಯಗಳ ಹರಾಜು ರದ್ದು ಮಾಡಲಾಗಿದೆ.ಜೂನ್ ತಿಂಗಳಲ್ಲಿ ರಾಜ್ಯ ಸರ್ಕಾರಗಳು ಗೋದಿ ಹಾಗೂ ಅಕ್ಕಿ ಪಡೆಯಲು ಅವಕಾಶವಿಲ್ಲ.
ಗೋದಿ ಹಾಗೂ ಅಕ್ಕಿ ದಾನ್ಯಗಳ ಬೆಲೆ ಏರಿಕೆ ಸಮತೋಲನ ಕಾಪಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಈ ಭಾರಿ OMSSD ಹರಾಜಿನಲ್ಲಿ ಏಕಕಾಲದಲ್ಲಿ 10-100 ಮೆಟ್ರಿಕ್ ಟನ್ ಗಳಷ್ಟು ಅಕ್ಕಿ/ಗೋದಿ ಹರಾಜಿನ ಮೂಲಕ ಖರೀದಿಸಬಹುದು. ಈ ಹಿಂದೆ ಹರಾಜಿನಲ್ಲಿ ಗರಿಷ್ಟ 3000 ಮೆಟ್ರಿಕ್ ಟನ್ ದಾನ್ಯಗಳನ್ನ ಖರೀದಿಗೆ ಅವಕಾಶ ಇತ್ತು. ಸಣ್ಣ ಹಾಗೂ ಮಧ್ಯಮ ಖರೀದಿದಾರರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಹಾಗೂ ಈ ಯೋಜನೆಯ (OMSSD) ಹೆಚ್ಚು ಜನರನ್ನ ತಲುಪಲು ಸಾಧ್ಯವಾಗಲಿದೆ, ಜೊತೆಗೆ ಖರೀದಿ ಮಾಡಿದ ದಾನ್ಯಗಳು ಕೂಡಲೇ ಜನರಿಗೆ ತಲುಪಲು ಸಾಧ್ಯವಾಗಲಿದೆ ಎಂದು ಸಮರ್ಥನೆ ನೀಡಿದೆ.
ಸಿಎಂ ಸಿದ್ದರಾಮಯ್ಯ ಅವರ ಆರೋಪಗಳೇನು?
ಎಫ್ಸಿಐ ಒಪ್ಪಿಗೆ ಪತ್ರದ ಆಧಾರದ ಮೇಲೆ ಜು.1 ರಿಂದ ಜಾರಿ ಮಾಡಲಾಗುವುದು ಎಂದು ಘೋಷಿಸಿದೆವು. ಎಫ್ಸಿಐನ ಪ್ರಧಾನ ವ್ಯವಸ್ಥಾಪಕ ಹರೀಶ್ ಎಂಬವರು 7 ಲಕ್ಷ ಟನ್ ಅಕ್ಕಿ ಸಂಗ್ರಹ ಇದೆ ಎಂದು ತಿಳಿಸಿದ್ದಾರೆ. ಅನ್ನಭಾಗ್ಯ ಕಾರ್ಯಕ್ರಮವನ್ನು ಜಾರಿಗೊಳಿಸದೇ ಇರುವಂತೆ ಅಡ್ಡಿಪಡಿಸುವುದು ಇದರ ಹಿಂದಿನ ಉದ್ದೇಶ ಎಂದು ಸಿಎಂ ಆರೋಪ ಮಾಡಿದರು.