ನಾನು ಹಿಂದೂವಾಗಿದ್ದೆ ಎನ್ನುವ ಒಂದೇ ಕಾರಣಕ್ಕೆ ನನ್ನ ಮೇಲೆ ತಾರತಮ್ಯ ಮಾಡಲಾಯಿತು ಎಂದ ಮಾಜಿ ಸ್ಪಿನ್ನರ್

ಕ್ರೀಡೆ

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮೇಲೆ ಪಾಕ್ ಮಾಜಿ ಕ್ರಿಕೆಟಿಗ ದಾನೀಶ್ ಕನೇರಿಯಾ ಗಂಭೀರ ಆರೋಪ ಮಾಡಿದ್ದಾರೆ. ಸದಾ ಒಂದಿಲ್ಲೊಂದು ಸೆನ್ಸೇಷನಲ್‌ ವಿಚಾರದ ಮೂಲಕ ಸುದ್ದಿಯಲ್ಲಿರುವ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನೀಶ್ ಕನೇರಿಯಾ, ಮಾಜಿ ನಾಯಕ ಶಾಹೀದ್ ಅಫ್ರಿದಿ ಮೇಲೆ ಧಾರ್ಮಿಕ ವಿಚಾರವಾಗಿ ಒಂದು ಗಂಭೀರ ಆರೋಪ ಮಾಡಿದ್ದಾರೆ. IANS ಸುದ್ದಿಸಂಸ್ಥೆಯ ಜತೆಗೆ ಮಾತನಾಡಿದ ದಾನೀಶ್ ಕನೇರಿಯಾ,

ಶಾಹಿದ್ ಅಫ್ರಿದಿ ಓರ್ವ ದೊಡ್ಡ ಸುಳ್ಳುಗಾರ. ನಾನು ಹಿಂದೂವಾಗಿದ್ದೆ ಎನ್ನುವ ಒಂದೇ ಕಾರಣಕ್ಕೆ ಪಾಕಿಸ್ತಾನ ತಂಡದಲ್ಲಿ ಆತ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಆರೋಪ ಮಾಡಿದ್ದಾರೆ. ಶಾಹಿದ್ ಅಫ್ರಿದಿ ಮೇಲೆ ಈ ರೀತಿಯ ಆರೋಪ ಕೇಳಿ ಬಂದಿರುವುದು ಇದೇ ಮೊದಲೇನಲ್ಲ. ಈ ಮೊದಲು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡಾ ಇದೇ ರೀತಿಯ ಆರೋಪ ಮಾಡಿದ್ದರು. ನಮ್ಮ ತಂಡದಲ್ಲಿದ್ದ ಸ್ಪಿನ್ನರ್ ಹಿಂದೂ ಆಗಿದ್ದ ಕಾರಣಕ್ಕೆ ನಮ್ಮ ತಂಡದ ಕೆಲ ಸದಸ್ಯರು ಅವರನ್ನು ಅಸಹಜವಾಗಿ ನಡೆಸುಕೊಂಡಿದ್ದರು ಎಂದು ಆರೋಪಿಸಿದ್ದರು.

ಈ ಕುರಿತಂತೆ ಮಾತನಾಡಿರುವ ದಾನೀಶ್ ಕನೇರಿಯಾ, ನನ್ನ ಸಮಸ್ಯೆಯ ಕುರಿತಂತೆ ಸಾರ್ವಜನಿಕವಾಗಿ ಮೊದಲು ಮಾತನಾಡಿದ್ದು ಶೋಯೆಬ್ ಅಖ್ತರ್. ಇದನ್ನು ದಿಟ್ಟವಾಗಿ ಹೇಳಿದ್ದಕ್ಕೆ ಅಖ್ತರ್‌ಗೆ ಹ್ಯಾಟ್ಸ್‌ಅಫ್. ವಿವಿಧ ಅಧಿಕಾರಿಗಳ ಮೂಲಕ ನನ್ನ ಮೇಲೆ ಒತ್ತಡವನ್ನು ಹೇರಲಾಗಿತ್ತು. ನಾನು ಯಾವಾಗಲೂ ಶಾಹಿದ್ ಅಫ್ರಿದಿ ಅವರಿಂದ ತಿರಸ್ಕರಿಸಲ್ಪಟ್ಟಿದ್ದೆ. ನಾವು ಇಬ್ಬರು ಒಂದೇ ತಂಡದ ಒಟ್ಟಾಗಿಯೇ ಆಡಿದ್ದೇವೆ. ಅಫ್ರಿದಿ ಯಾವಾಗಲೂ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ನನ್ನನ್ನು ಬೆಂಚ್ ಕಾಯಿಸುವಂತೆ ಮಾಡಿದ್ದರು. ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುತ್ತಿರಲಿಲ್ಲ ಎಂದು ದಾನೀಶ್ ಕನೇರಿಯಾ ಹೇಳಿದ್ದಾರೆ.

Leave a Reply

Your email address will not be published. Required fields are marked *