ಬೆಂಗಳೂರು: ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಕರ್ನಾಟಕ ಚುನಾವಣೆ (Karnataka Election) ಇಂದು ನಡೆಯಲಿದೆ. ಬೆಳಗ್ಗೆ ಏಳು ಗಂಟೆಗೆ ರಾಜ್ಯದ 224 ಮತ ಕ್ಷೇತ್ರಗಳಲ್ಲಿ ಮತದಾನ ಆರಂಭ ಆಗಲಿದೆ.
ಸಂಜೆ ಆರು ಗಂಟೆಯವರೆಗೂ ನಿರಂತರವಾಗಿ ಮತದಾನ (Vote) ಮಾಡಲು ಅವಕಾಶ ಇರಲಿದೆ. ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ನಡೆಸಿದೆ. ಹಿಂದೆಂದೂ ಕಾಣದಷ್ಟು ಭದ್ರತೆ ಕೂಡ ಕೈಗೊಳ್ಳಲಾಗಿದೆ
ಇಂದು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಪ್ರಕ್ರಿಯೆ ಸುಗಮವಾಗಿ ನಡೆದಿದೆ. ಪ್ರಧಾನಿ ಮೋದಿ (PM Modi), ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ (Rahul Dravid) ಸೇರಿ ಅನೇಕರು ಬನ್ನಿ ಮತ ಚಲಾಯಿಸಿ ಎಂದು ಕರೆ ನೀಡಿದ್ದಾರೆ.