ಬೆಂಗಳೂರು:- ದೀಪಾವಳಿ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಪಟಾಕಿ ಸಿಡಿಸಲು ಸರ್ಕಾರದಿಂದ ಹೊಸ ನಿಯಮ ಜಾರಿ ಆಗಿದೆ. ಅಲ್ಲದೇ ರೂಲ್ಸ್ ಬ್ರೇಕ್ ಮಾಡಿದ್ರೆ ಕ್ರಮ ಫಿಕ್ಸ್ ಎನ್ನಲಾಗಿದೆ.
ಹಬ್ಬದಲ್ಲಿ ಪರಿಸರದ ಮೇಲೆ ಆಗುವ ಮಾಲಿನ್ಯ ತಡೆಗಟ್ಟಲು ರಾಜ್ಯ ಸರ್ಕಾರ ಮುಂದಾಗಿದೆ. ಪಟಾಕಿ ಸಿಡಿಸುವಾಗ ಅವಘಡ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಿ ಅಂತ ಜಿಲ್ಲಾಧಿಕಾರಿಗಳು ಮತ್ತು ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ. ಬೆನ್ನಲ್ಲೇ ಪೊಲೀಸ್ ಇಲಾಖೆ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸಲು ಗೈಡ್ಲೈನ್ಸ್ ಹೊರಡಿಸಿದೆ.
ಪಟಾಕಿ ಸಿಡಿಸಲು ಗೈಡ್ಲೈನ್ಸ್!
ದೀಪಾವಳಿಗೆ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶ
ಪರಿಸರಕ್ಕೆ ಹಾನಿಕರ ಪಟಾಕಿ ಹಚ್ಚೋದು ಸಂಪೂರ್ಣ ನಿಷೇಧ
ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಬೇಕು
ನಿಷೇಧಿತ ಪಟಾಕಿ ಸಿಡಿಸದಂತೆ ತಡೆಯಲು ಅಗತ್ಯ ಕ್ರಮಗಳು
ನಿಗಧಿತ ಅವಧಿಯನ್ನ ಮೀರಿ ಪಟಾಕಿ ಸಿಡಿಸಿದ್ರೆ ಕೇಸ್ ದಾಖಲು
ಪರಿಸರ ಸಂರಕ್ಷಣಾ ಕಾಯ್ದೆ 1986, ಶಬ್ಧ ಮಾಲಿನ್ಯ ಕಾಯ್ದೆ-2000
ಬಿಎನ್ಎಸ್ ಆಯಕ್ಟ್ 2023 ಅಡಿಯಲ್ಲಿ ಕೇಸ್ ಬೀಳೋದು ಪಕ್ಕಾ
ಪಟಾಕಿ ತಯಾರಕರು, ಮಾರಾಟಗಾರರಿಗೂ ಮಾರ್ಗಸೂಚಿ
ಪಟಾಕಿ ಅವಘಡಗಳು ಆಗದಂತೆ ಮಾರಾಟ ಮಾಡಲು ಸೂಚನೆ
ಪಟಾಕಿ ಹೊಡೆಯುವಾಗ ಸಾಕಷ್ಟು ಬಾರಿ ಕಣ್ಣಿಗೆ ಗಾಯಗಳಾಗುವ ಸಂಭವ ಹೆಚ್ಚು. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಒಟ್ಟಾರೆ ಸುಪ್ರೀಂ ಕೋರ್ಟ್ 125 ಡೆಸಿಬಲ್ಗಿಂತ ಹೆಚ್ಚು ಶಬ್ದ ಮಾಡುವ ಮತ್ತು ಹೆಚ್ಚು ಹೊಗೆ ಹೊರಹೊಮ್ಮುವ ರಾಸಾಯನಿಕ ಪಟಾಕಿಗಳನ್ನು ನಿಷೇಧಿಸಿದೆ.