ಶಾಲೆ-ಕಾಲೇಜು ವಾಹನ, ಕ್ಯಾಬ್, ಟ್ರಕ್ಗಳ ಮೇಲೆ ವಿಧಿಸುವ ತೆರಿಗೆಯನ್ನು ಹೆಚ್ಚಿಸಲಾಗಿದೆ. 15 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಕ್ಯಾಬ್ಗಳಿಗೆ ಆ ವಾಹನದ 15% ರಷ್ಟು ತೆರಿಗೆ, 10 ಲಕ್ಷ ರೂ. ನಿಂದ 15 ಲಕ್ಷ ರೂ. ಬೆಲೆಯ ಕ್ಯಾಬ್ಗಳಿಗೆ ಅದರ ಮೌಲ್ಯದ 9% ರಷ್ಟು ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಹೆಚ್ಚಳದಿಂದ 472 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಜುಲೈ 7ರಂದು ಮಂಡಿಸಿದ್ದ ಬಜೆಟ್ನಲ್ಲಿ ಆಯ್ದ ವಾಹನಗಳ ತೆರಿಗೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪ್ರಕಟಿಸಿದ್ದರು. ಅದಕ್ಕೆ ಪೂರಕವಾಗಿ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಮಸೂದೆ 2023’ಕ್ಕೆ ಸದನದಲ್ಲಿ ಒಪ್ಪಿಗೆ ಪಡೆಯಲಾಗಿತ್ತು
ಯಾವುದಕ್ಕೆ ಎಷ್ಟು?
ಆವರಣದಲ್ಲಿರುವುದು ಹಿಂದಿನ ತೆರಿಗೆ
1.5-2 ಟನ್ ವಾಹನ – 20,000 ರೂ.(10,000 ರೂ.)
2-3 ಟನ್ ವಾಹನ – 30,000 ರೂ. (15,000 ರೂ.)
3-5.5 ಟನ್ ವಾಹನ – 40,000 ರೂ. (20,000 ರೂ.)
5.5-7.5 ಟನ್ ವಾಹನ – ವರ್ಷಕ್ಕೆ 7,200 ರೂ. (ಪೂರ್ಣಾವಧಿಗೆ 60,000 ರೂ.)
7.5-9.5 ಟನ್ ವಾಹನ – ವರ್ಷಕ್ಕೆ 7,200 ರೂ. (ಪೂರ್ಣಾವಧಿಗೆ 80,000 ರೂ.)
9.5-12 ಟನ್ ವಾಹನ – ವರ್ಷಕ್ಕೆ 7,200 ರೂ. (ಪೂರ್ಣಾವಧಿಗೆ 1 ಲಕ್ಷ ರೂ.)