ಬೆಂಗಳೂರು:- ಆರೋಪಿಗೆ ಪಾಸ್ಪೋರ್ಟ್ ನವೀಕರಣ ಅವಕಾಶ ನಿರಾಕರಿಸಿದ್ದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಪಾಸ್ ಪೋರ್ಟ್ ನವೀಕರಣಕ್ಕೆ ನಿರಾಕರಿಸಿ ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿ ನೀಡಿದ್ದ ಹಿಂಬರಹವನ್ನು ಎತ್ತಿಹಿಡಿದಿದೆ.
ಪಾಸ್ ಪೋರ್ಟ್ ಕಾಯಿದೆಯ ಯಾವುದೇ ನಿಯಮಗಳಲ್ಲಿ ಪಾಸ್ ಪೋರ್ಟ್ ವಿತರಣೆ/ನವೀಕರಣಕ್ಕೆ ಬಾಕಿ ಇರುವ ಕ್ರಿಮಿನಲ್ ಕೇಸ್ ಅಲಕ್ಷಿಸುವ ಯಾವುದೇ ಪ್ರತ್ಯೇಕ ಮಾನದಂಡವಿಲ್ಲ. ಭಾರತೀಯ ಸಂವಿಧಾನದ 226ನೇ ವಿಧಿಯಡಿ ಲಭ್ಯವಿರುವ ಅಧಿಕಾರವನ್ನು ಬಳಸಿ ಈ ಕೋರ್ಟ್ ಒಂದು ಆದೇಶದ ಮೂಲಕ ನಿಯಮವನ್ನು ಸರಳೀಕರಣ ಮಾಡಲಾಗದು. ಸೆಕ್ಷನ್ 6(2)(ಎಫ್) ಪ್ರಕಾರ ಯಾವುದೇ ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆಯಾದರೂ ಸಹ ಅದು ಹೊಸದಾಗಿ ವಿತರಣೆ, ನವೀಕರಣ ಹಾಗೂ ಮರು ವಿತರಣೆಗೆ ಆಗಿರಬಹುದು. ಅಂತಹ ವೇಳೆ ನಿಯಮಗಳನ್ನು ಸಡಿಲಿಕೆ ಮಾಡಲಾಗದು ಎಂದು ಪೀಠ ತಿಳಿಸಿದೆ.