ಹಿಟ್ ಮ್ಯಾನ್, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದರು.
ಹೌದು, ಏಕದಿನ ಮಾದರಿ ಪಂದ್ಯದಲ್ಲಿ 10,000 ರನ್ಗಳ ಮೈಲುಗಲ್ಲು ಪೂರೈಸಿದ ಬ್ಯಾಟರ್ ಎಂಬ ಶ್ರೇಯಕ್ಕೆ ಮುಂಬೈಕರ್ ರೋಹಿತ್ ಪಾತ್ರರಾದರು. ಕೊಲಂಬೊದ ಆರ್. ಪ್ರೇಮದಾಸ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಈ ಸಾಧನೆ ಮಾಡಿದರು.
ವೇಗವಾಗಿ 10,000 ರನ್ ಪೂರೈಸಿದವರ ಪಟ್ಟಿಯಲ್ಲಿ ಹಿಟ್ ಮ್ಯಾನ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನೂ ನಿನ್ನೆಯಷ್ಟೇ 13,000 ರನ್ ಪೂರೈಸಿದ ರನ್ ಮೆಷಿನ್ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮೂರನೇ ಸ್ಥಾನದಲ್ಲಿದ್ದಾರೆ.
ಈವೆರೆಗೆ ರೋಹಿತ್ ಶರ್ಮಾ 147 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 48.91ರ ಸರಾಸರಿಯಲ್ಲಿ 10,000* ರನ್ ಚಚ್ಚಿದ್ದಾರೆ. ಇದರಲ್ಲಿ 3 ದ್ವಿಶತಕ ಸೇರಿ 30 ಶತಕ ಹಾಗೂ 51 ಅರ್ಧಶತಕಗಳು ಸೇರಿವೆ.