ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿ ಬಳಿಕ ಆಕೆಯ ದೇಹವನ್ನು 224 ತುಂಡುಗಳಾಗಿ ಕತ್ತರಿಸಿ ನದಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ಬ್ರಿಟನ್ನಲ್ಲಿ ನಡೆದಿದೆ.
28 ವರ್ಷದ ನಿಕೋಲಸ್ ಮ್ಯಾಟ್ಸನ್ ತನ್ನ ಪತ್ನಿ ಹೋಲಿ ಬ್ರಮ್ಲೇ ಎಂಬ ಮಹಿಳೆಯನ್ನು ಕೊಲೆ ಮಾಡಿಬಳಿಕ ನೀರಿಗೆ ಎಸೆದಿದ್ದಾನೆ.
ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದು ನಂತರ ಆಕೆಯ ದೇಹವನ್ನು 200 ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ ನದಿಗೆ ಎಸೆದಿದ್ದಾನೆ.
ಬ್ರಾಮ್ಮಿ ನಾಪತ್ತೆಯಾದ ಎಂಟು ದಿನಗಳ ನಂತರ ,ಲಿಂಕನ್ಶೈರ್ನ ಬಾಸಿಂಗ್ಹ್ಯಾಮ್ನ ವಿಥಮ್ ನದಿಯಲ್ಲಿ ಹೋಲಿ ಬ್ರಮ್ಲೇ ಶವ ಪತ್ತೆಯಾಗಿತ್ತು. ವಾಕಿಂಗ್ ಹೋಗಿದ್ದ ವ್ಯಕ್ತಿಯೊಬ್ಬರು ಇದನ್ನು ಕಂಡು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ದೂರಿನ ಸಂಬಂಧ ನದಿ ಬಳಿಗೆ ಬಂದ ಪೊಲೀಸರು ಪ್ಲಾಸ್ಟಿಕ್ ಚೀಲವನ್ನು ನದಿಯಿಂದ ಮೇಲಕ್ಕೆತ್ತಿ ನೋಡಿದಾಗ ಅದರಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿದೆ, ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಕೊಲೆಯಾದ ಮಹಿಳೆಯ ಗುರುತು ಪತ್ತೆಯಾಗಿದೆ.
ಈ ಘಟನೆ ಸಂಬಂಧ ಕೊಲೆಯಾದ ಮಹಿಳೆಯ ಪತಿಯನ್ನು ವಿಚಾರಣೆ ನಡೆಸಿದ ವೇಳೆ ಮೊದಲು ತನಗೆ ಏನೂ ಗೊತ್ತಿಲ್ಲ ತನ್ನ ಪತ್ನಿ ನಾಪತ್ತೆಯಾಗಿ ವಾರಗಳು ಕಳೆದಿದೆ ಎಂದು ಹೇಳಿದ್ದ ಇದರಿಂದ ಅನುಮಾನಗೊಂಡ ಪೊಲೀಸರು ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸಿದ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.