ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ರೆ ರಾಜ್ಯದ ಜನತೆಗೆ ತಲಾ 10 ಕೆಜಿ ಅಕ್ಕಿ ಸಿಗ್ಬೇಕಿತ್ತು. ಬಿಜೆಪಿ- ಕಾಂಗ್ರೆಸ್ ನ ದ್ವೇಶ ರಾಜಕಾರಣದಿಂದ ರಾಜ್ಯಕ್ಕೆ ಅಕ್ಕಿ ಬರ್ಲಿಲ್ಲ, ಕ್ಯಾಬಿನೆಟ್ ನಿರ್ಧಾರದಂತೆ ಪಡಿತರದಾರರ ಅಕೌಂಟ್ ಗೆ ಅಕ್ಕಿಯ ಹಣ ಹಾಕೋ ಪ್ರಕ್ರಿಯೆ ಸದ್ಯ ಗೊಂದಲದ ಗೂಡಾಗಿದೆ. ಆಹಾರ ಸಚಿವರು, ಸಿಎಂ, ಡಿಸಿಎಂ ಗೊಂದಲದ ಹೇಳಿಕೆಗಳು ಎಲ್ಲವೂ ಅಯೋಮಯ ಎನ್ನಿಸ್ತಿವೆ. ಅನ್ನಭಾಗ್ಯ ಯೋಜನೆ ಮತ್ತಷ್ಟು ವಿಳಂಬವಾಗ್ತಿದ್ದು ಇನ್ನೆರಡು ವಾರ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯದ ತಲಾ 10 ಕೆಜಿ ಕೊಡುವ ಯೋಜನೆ ಎಲ್ಲವೂ ಅಂದುಕೊಂಡಂತೆ ಅಗಿದ್ರೆ ಇಂದಿನಿಂದ ಜಾರಿಯಾಗ್ಬೇಕಿತ್ತು. ಆದ್ರೆ ಕಾಂಗ್ರೆಸ್- ಬಿಜೆಪಿಯ ದ್ವೇಶ ರಾಜಕಾರಣದಿಂದ ಅದು ಈಡೇರ್ಲಿಲ್ಲ ರಾಜ್ಯ ಸರ್ಕಾರ ಬೇರೆ- ಬೇರೆ ರಾಜ್ಯಗಳಿಂದ ಅಕ್ಕಿ ತರಲು ಎಷ್ಟೇ ಪ್ರಯತ್ನ ಪಟ್ರು ಸಾಧ್ಯವಾಗ್ಲಿಲ್ಲ.
ಕೊನೆಗೆ ಕ್ಯಾಬಿನೆಟ್ ನಲ್ಲಿ ಕೇಂದ್ರ ಕೊಡ್ತಿರುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯದ 5 ಕೆಜಿ ಅಕ್ಕಿಯ ಹಣವನ್ನು ಪಡಿತರ ಅಕೌಂಟ್ ಗೆ ಹಾಕಲು ನಿರ್ಧರಿಸಲಾಯ್ತು.ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಇಂದಿನಿಂದಲೇ ಪಡಿತರ ಅಕೌಂಟ್ ಗೆ ಹಣ ಹಾಕ್ತೇವೆ ಅಂತ ಹೇಳಿದ್ರು ಆದ್ರೆ ಅದರ ಸೌಂಡೇ ಇಲ್ಲ, ಅದರ ಪ್ರಕ್ರಿಯೆಗೂ ಚಾಲನೆ ಸಿಗದೆ ನಿಂತಲ್ಲೇ ನಿಂತಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ, ಡಿಕೆಶಿ, ಆಹಾರ ಸಚಿವರ ಹೇಳಿಕೆಗಳು ಗೊಂದಲದ ಗೂಡಾಗಿವೆ…