ಬೆಂಗಳೂರು ;– ಪ್ರತಾಪ ಸಿಂಹ ಅವರದ್ದು ಚಿಲ್ಲರೆ ಮನಸ್ಥಿತಿ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಎಂ.ಬಿ ಪಾಟೀಲ್ ಹೆಗಲ ಮೇಲೆ ಬಂದೂಕು ಇಟ್ಟು ಡಿಸಿಎಂ ಡಿ ಕೆ ಶಿವಕುಮಾರ್ಗೆ ಶೂಟ್ ಮಾಡಿದ್ದಾರೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನನ್ನ ಹಾಗೂ ಡಿ ಕೆ ಶಿವಕುಮಾರ್ ಸಂಬಂಧ ಚೆನ್ನಾಗಿದೆ. ಪಕ್ಷದ ಮಟ್ಟದಲ್ಲಿ ನಮ್ಮದೇ ಆದ ಭಿನ್ನಾಭಿಪ್ರಾಯಗಳು ಇರಬಹುದು. ಇಲ್ಲಾ ಅಂತ ನಾನು ಹೇಳಲ್ಲ. ಅದು ಪಕ್ಷದ ಒಳಗಡೆ ಮಾತ್ರ, ಅದರ ಹೊರತಾಗಿ ನಮ್ಮ ಸಂಬಂಧ ಚೆನ್ನಾಗಿದೆ. ಸಿದ್ದರಾಮಯ್ಯ ಇನ್ಯಾರದೋ ಹೆಗಲ ಮೇಲೆ ಬಂದೂಕು ಇಟ್ಟು ಶೂಟ್ ಮಾಡುವಂತವರಲ್ಲ. ನಾನು ಅಷ್ಟೇ, ಏನೇ ಇದ್ರೂ ಡೈರೆಕ್ಟ್ ಆಗಿಯೇ ಹೊಡೆಯುತ್ತೇನೆ. ನನಗೂ ಆ ತಾಕತ್ತಿದೆ” ಎಂದು ಕಿಡಿಕಾರಿದ್ದಾರೆ.
“ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಮುಂದುವರಿಯುವ ವಿಚಾರವಾಗಿ ಹಿಂದೆ ನಾನು ಏನು ಹೇಳಿದ್ದೇನೊ ಅದಕ್ಕೆ ನಾನು ಈಗಾಗಲೇ ಕ್ಲಾರಿಫಿಕೇಶನ್ ಕೊಟ್ಟಿದ್ದೇನೆ. ಅದರ ಬಗ್ಗೆ ಈಗ ಮತ್ತೆ ಮಾತನಾಡಲ್ಲ. ಸಚಿವ ಮಹದೇವಪ್ಪ ಹೇಳಿಕೆ ವಿಚಾರ ಅವರಿಗೆ ಬಿಟ್ಟಿದ್ದು. ಅವರ ಹೇಳಿಕೆ ಬಗ್ಗೆಯೂ ನಾನು ಮಾತನಾಡುವುದಿಲ್ಲ. ಅದನ್ನ ಅವರ ಬಳಿಯೇ ಕೇಳಿ” ಎಂದು ಎಂ. ಬಿ. ಪಾಟೀಲ್ ಹೇಳಿದರು.
ಸಂಚಿವ ಸಂಪುಟ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಹೈಕಮಾಂಡ್ ಯಾವ ಸೂಚನೆಯನ್ನೂ ಕೊಟ್ಟಿಲ್ಲ. ಅವತ್ತು ಕೆ.ಸಿ ವೇಣುಗೋಪಾಲ್ ಪ್ರೆಸ್ ಮೀಟ್ ನಲ್ಲಿ ಏನು ಹೇಳಿದ್ರೋ ಅಷ್ಟೇ ನಮಗೂ ಮಾಹಿತಿ ಇರುವುದು. ಈ ಬಗ್ಗೆ ಮಾತಾಡಬಾರದು ಅಂತ ಹೈಕಮಾಂಡ್ ಯಾವ ಡೈರೆಕ್ಷನ್ನೂ ಕೊಟ್ಟಿಲ್ಲ ಎಂದು ಪ್ರತಾಪ್ ಸಚಿವ ಎಂ ಬಿ ಪಾಟೀಲ್ ವಿವರಿಸಿದರು.