ಕೆ.ಆರ್.ಪುರ: ಧಾರ್ಮಿಕ, ಪರಂಪರೆ, ಸಂಸ್ಕೃತಿ ಮತ್ತು ಜಾತ್ಯತೀತ ನಿಲುವಿನಿಂದ ಬೆಂಗಳೂರು ನಗರವನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರನ್ನು ಒಂದು ಜಾತಿ ಧರ್ಮಕ್ಕೆ ಸೀಮಿತಗೊಳಿಸಬಾರದು ಬೆಂಗಳೂರು ನಗರ ನಿರ್ಮಾಣ ಮಾಡಿರುವಲ್ಲಿ ಅವರ ಪಾತ್ರ ಅನನ್ಯ ಅವರ ಸ್ಮರಣೆಗಾಗಿ ಕೆ.ಆರ್.ಪುರದ ವೃತ್ತದಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಬಿ.ಎ. ಬಸವರಾಜ ಭರವಸೆ ನೀಡಿದರು.
ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿ ವತಿಯಿಂದ ಶುಕ್ರವಾರ ಕೆ.ಆರ್.ಪುರದಲ್ಲಿ ಏರ್ಪಡಿಸಿದ್ದ 514ನೇ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆಂಪೇಗೌಡರು ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ದೂರದೃಷ್ಟಿ ಯಿಂದ ಮಾಡುತ್ತಿದ್ದರು.ದೇಶ, ರಾಜ್ಯ, ಬೆಳೆಯಬೇಕಾದರೆ ನಗರಗಳ ಬೆಳವಣಿಗೆ ಮುಖ್ಯ ಎಂಬುದನ್ನು ಅರಿತಿದ್ದ ಅವರು, ಬೆಂಗಳೂರಿಗೆ ಭದ್ರ ಬೂನಾದಿ ಹಾಕಿದ ನಾಯಕ ಎಂದು ತಿಳಿಸಿದರು.
ಸರ್ವಜನಾಂಗದ ಅಭಿವೃದ್ಧಿಗೆ ಕೆಂಪೇಗೌಡರು ಶ್ರಮಿಸಿದ್ದು, ಒಂದು ಸಮುದಾಯಕ್ಕೆ ಸ್ಥೀಮಿತರಲ್ಲ ಎಲ್ಲಾ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ಮಹನೀಯನನ್ನ ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಎಲ್ಲ ಸಮುದಾಯಗಳು ಅಭಿವೃದ್ಧಿಯಾದಗ ಮಾತ್ರ ದೇಶದ ಅಭಿವೃದ್ಧಿ ಸಾದ್ಯ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಎಲ್ಲ ಸಮಾಜದ ಅಭಿವೃದ್ಧಿಗೆ ಬದ್ದವಾಗಿದೆ ಎಂದು ತಿಳಿಸಿದರು.
ಕ್ಷೇತ್ರದ ಸರ್ವ ಜನಾಂಗದ ಅಭಿವೃದ್ಧಿಗೆ ನಾನು ಬದ್ದನಾಗಿದ್ದು,ಅವರ ಬೇಡಿಕೆಗಳನ್ನು ಹಂತಹಂತವಾಗಿ ಮಾಡಲಾಗುವುದೆಂದು ಭರವಸೆ ನೀಡಿದರು.
ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು,ಹಂತಹಂತವಾಗಿ ಪರಿಹರಿಸಲಾಗುವುದೆಂದು ವಿವರಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ವೈ.ರವಿ, ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್,ಜಯಪ್ರಕಾಶ್, ಅಂತೋಣಿಸ್ವಾಮಿ, ಮುಖಂಡರಾದ
ಮುನೇಗೌಡ, ಲೋಕೆಶ್ ಗೌಡ, ಗಂಗಧರ್,ಪ್ರದೀಪ್ ಗೌಡ,ರಮೇಶ್ ಗೌಡ,ಇದ್ದರು.