ಏ. 13ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಶಾಪಿಂಗ್ ಮಾಲ್ವೊಂದರಲ್ಲಿ ವ್ಯಕ್ತಿಯೋರ್ವ ಐವರು ಮಹಿಳೆಯರು ಸೇರಿದಂತೆ ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಹತ್ಯೆ ನಡೆಸಿದ ಆರೋಪಿಯು 40 ವರ್ಷದ ಜೋಯಲ್ ಕೌಚಿಯಾಗಿದ್ದು ಹಲ್ಲೆ ನಡೆಸಿದ ದಿನವೇ ವೆಸ್ಟ್ಫೀಲ್ಡ್ ಬಾಂಡಿ ಜಂಕ್ಷನ್ ಮಾಲ್ನಲ್ಲಿ ಈತನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ.
ಮೃತರದಲ್ಲಿ ಆರು ಜನರಲ್ಲಿ ಐವರು ಮಹಿಳೆಯರೇ ಆಗಿದ್ದಾರೆ. ಗಾಯಗೊಂಡವರೆಲ್ಲರೂ ಮಹಿಳೆಯರೇ ಆಗಿದ್ದಾರೆ. ಮೇಲ್ನೋಟಕ್ಕೆ ನೋಡಿದರೂ ಈತನ ಟಾರ್ಗೆಟ್ ಮಹಿಳೆಯರೇ ಆಗಿದ್ದಾರೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿ ಫೂಟೇಜ್ನಲ್ಲಿ ಕಂಡಿರುವ ದೃಶ್ಯದ ಪ್ರಕಾರ ಜೋಯಲ್ ಕೌಚಿ ಮಹಿಳೆಯರನ್ನು ನೋಡಿ ನೋಡಿಯೇ ಹಲ್ಲೆ ಮಾಡಿದಂತಿದೆ. ಅಪರಾಧಿಯು ಪುರುಷರನ್ನು ಬಿಟ್ಟು ಮಹಿಳೆಯರನ್ನೇ ಗುರಿ ಮಾಡಿದ್ದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಮಗನಿಗೆ ಒಬ್ಬ ಗರ್ಲ್ ಫ್ರೆಂಡ್ ಕೂಡ ಸಿಕ್ಕಿಲ್ಲ. ಈ ಹತಾಶೆಯಲ್ಲಿದ್ದ ಈತನಿಗೆ ಸಿಜೋಫ್ರೆನಿಯಾ ರೋಗ ಇತ್ತು. ಅವನಿಗೆ ಗರ್ಲ್ಫ್ರೆಂಡ್ ಬೇಕಿತ್ತು. ಆದರೆ ಸೋಷಿಯಲ್ ಸ್ಕಿಲ್ ಇರಲಿಲ್ಲ. ಇದರಿಂದ ಹುಚ್ಚನಂತಾಗಿದ್ದ. ಅವ ನನ್ನ ಮಗ. ನಿಮಗೆ ಆತ ರಕ್ಕಸ ಎನಿಸಬಹುದು. ನನಗೆ ಆತ ಕಾಯಿಲೆಯಿಂದ ಬಳಲುತ್ತಿದ್ದ ಹುಡುಗ,’ ಎಂದು ಜೋಯಲ್ನ ತಂದೆ ಆಂಡ್ರ್ಯೂ ಕೌಚಿ ಹೇಳಿದ್ದಾರೆ.