ಕುವೈತ್ ನ ದಕ್ಷಿಣ ಅಹ್ಮದಿ ಗವರ್ನರೇಟ್ನಲ್ಲಿ ನಡೆದ ಭೀಕರ ಅಗ್ನಿ ಅವಘಡದಲ್ಲಿ 46 ಭಾರತೀಯರು ಸೇರಿದಂತೆ 50 ಜನರು ಮೃತಪಟ್ಟಿದ್ದರು. ಈ ಅಗ್ನಿ ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ಕುವೈತ್ ಸರ್ಕಾರ ತಲಾ 15,000 ಡಾಲರ್ ಪರಿಹಾರ ನೀಡಲು ಮುಂದಾಗಿದೆ.
ಕುವೈತ್ ಅಧಿಕಾರಿಗಳ ಪ್ರಕಾರ, ಜುಲೈ 12 ರಂದು ಮಂಗಾಫ್ ನಗರದ ಏಳು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಬೃಹತ್ ಅಗ್ನಿ ಅವಘಡವು ಕಟ್ಟಡದ ನೆಲ ಮಹಡಿಯಲ್ಲಿರುವ ಭದ್ರತಾ ಸಿಬ್ಬಂದಿ ಕೋಣೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಉಂಟಾಯಿತು.
ಈ ಕಟ್ಟಡವು 196 ವಲಸೆ ಕಾರ್ಮಿಕರಿಗೆ ನೆಲೆಯಾಗಿತ್ತು, ಬೆಂಕಿ ದುರಂತದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಭಾರತೀಯರಾಗಿದ್ದಾರೆ. ಕುವೈತ್ನ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆದೇಶದ ಮೇರೆಗೆ, ಸಂತ್ರಸ್ತರ ಕುಟುಂಬಗಳು ತಲಾ 15,000 ಡಾಲರ್ (ಅಂದಾಜು 12.5 ಲಕ್ಷ ರೂಪಾಯಿ) ಪರಿಹಾರವನ್ನು ನೀಡಲಾಗುವುದು ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸರ್ಕಾರಿ ಮೂಲಗಳು ಪರಿಹಾರ ಪಾವತಿಗಳನ್ನು ಪ್ರಕ್ರಿಯೆಗೊಳಿಸಿ ಸಂತ್ರಸ್ತರ ರಾಯಭಾರ ಕಚೇರಿಗಳಿಗೆ ತಲುಪಿಸುತ್ತದೆ ಎಂದು ಹೇಳಲಾಗಿದೆ.