ಬೆಂಗಳೂರು: ವಿಶ್ವಕಪ್ ಮಹಾ ಟೂರ್ನಿಗೆ ಬಿಸಿಸಿಐ ಸೆಲೆಕ್ಟರ್ಸ್ ಗಳು ಬಲಿಷ್ಠ 15 ಸದಸ್ಯರ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಿದ್ದು, ಈ ತಂಡಕ್ಕೆ ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿದೆ ಎಂದು ದಿಗ್ಗಜ ಟಾಮ್ ಮೂಡಿ ಭವಿಷ್ಯ ನುಡಿದಿದ್ದಾರೆ.
ರೋಹಿತ್ ಶರ್ಮಾ ಸಾರಥ್ಯದಲ್ಲಿ ಬಲಿಷ್ಠ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಆ ಮೂಲಕ ದಶಕದ ನಂತರ ಟ್ರೋಫಿ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ. ಈ ಕುರಿತು ಟಾಮ್ ಮೂಡಿ, ತಂಡದ ಸಾಮರ್ಥ್ಯ ಹಾಗೂ ವೈವಿಧ್ಯತೆ ಕುರಿತು ಸ್ಟಾರ್ ಸ್ಪೋರ್ಟ್ಸ್ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದು, ವಿಶ್ವಕಪ್ ಟೂರ್ನಿಯು ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆದಿದ್ದು , ತವರಿನ ಪಿಚ್ ಗಳು ಟೀಮ್ ಇಂಡಿಯಾ ಗೆಲುವು ಸಾಧಿಸಲು ನೆರವು ನೀಡಲಿವೆ ಎಂದು ಹೇಳಿದ್ದಾರೆ.
“ಭಾರತ ತಂಡವು ವಿಶ್ವಕಪ್ ಗೆಲ್ಲಲು ನಿಜಕ್ಕೂ ಉತ್ತಮ ತಂಡವನ್ನೇ ರಚಿಸಿದೆ ಎಂಬುದು ನನ್ನ ಅನಿಸಿಕೆ. ತವರಿನಲ್ಲಿ ವಿಶ್ವಕಪ್ ಆಯೋಜನೆಗೊಂಡಿರುವುದು ಭಾರತ ತಂಡಕ್ಕೆ ದೊಡ್ಡ ಲಾಭವಾಗಿದೆ. ಆದರೆ ಟ್ರೋಫಿ ಗೆಲ್ಲಲು ಆಟಗಾರರ ಫಿಟ್ನೆಸ್ ಮುಖ್ಯ ಆಗುತ್ತದೆ. ಅದರಲ್ಲೂ ವಿಶ್ವಶ್ರೇಷ್ಠ ವೇಗದ ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಅವರ ಫಿಟ್ನೆಸ್ ತಂಡಕ್ಕೆ ತುಂಬಾ ನಿರ್ಣಾಯಕ ಆಗಿರುತ್ತದೆ,” ಎಂದು ವಿಶ್ವಕಪ್ ವಿಜೇತ ಆಟಗಾರ ಹೇಳಿದ್ದಾರೆ
ಅಕ್ಟೋಬರ್ 5 ರಿಂದ ಅದ್ಧೂರಿ ಚಾಲನೆ
ಅಕ್ಟೋಬರ್ 5 ರಿಂದ ವಿಶ್ವಕಪ್ ಟೂರ್ನಿಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ಸ್ಅಪ್ ನ್ಯೂಜಿಲೆಂಡ್ ನಡುವಿನ ಪಂದ್ಯದ ಮೂಲಕ ಅದ್ಧೂರಿ ಚಾಲನೆ. ಅಕ್ಟೋಬರ್ 8 ರಂದು ಟೀಮ್ ಇಂಡಿಯಾ – ಆಸ್ಟ್ರೇಲಿಯಾ ನಡುವೆ ದೊಡ್ಡ ಆಟ ಎದುರಾಗಲಿದೆ ಏನು ಆಗುತ್ತೆ ಕಾದುನೋಡಬೇಕಿದೆ.