ಬೆಂಗಳೂರು:- ನಗರದ ತಲಘಟ್ಟಪುರ ಠಾಣೆ ವ್ಯಾಪ್ತಿಯ ಮಲ್ಲಸಂದ್ರದಲ್ಲಿ ಹಳೇ ದ್ವೇಷಕ್ಕೆ ಯುವಕ ನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಜರುಗಿದೆ. 30 ವರ್ಷದ ಶರತ್ ಕೊಲೆಯಾದ ದುರ್ದೈವಿ ಎನ್ನಲಾಗಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಶರತ್ನನ್ನು ಮಂಗಳವಾರ ರಾತ್ರಿ ಮಲ್ಲಸಂದ್ರ ಸಮೀಪದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದು, ಮೃತದೇಹವನ್ನು ಸಮೀಪದ ಪೊದೆ ಪಕ್ಕ ಎಸೆದು ಪರಾರಿಯಾಗಿದ್ದಾರೆ.
ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕೊಲೆಯಾದವ ಶರತ್ ಎಂಬುದು ಗೊತ್ತಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಮತ್ತೂಂದೆಡೆ ಶರತ್ ವಿರುದ್ಧ ಈ ಹಿಂದೆ ಆರ್.ಆರ್.ನಗರ ಠಾಣೆ ವ್ಯಾಪ್ತಿಯಲ್ಲಿ ಎನ್ಡಿಪಿಎಸ್ ಅಡಿಯಲ್ಲಿ ಕೇಸ್ ದಾಖಲಾಗಿತ್ತು ಎಂದು ಹೇಳಲಾಗಿದೆ