ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಇಂದು ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಬಿಬಿಎಂಪಿ ಶುರುಮಾಡಿತ್ತು. ಆದರೆ ಈ ವೇಳೆ ರಾಜಕಾಲುವೆ ಮೇಲೆ ಅಕ್ರಮವಾಗಿ ಕಟ್ಟಡಗಳನ್ನು ಮನೆ ಮಾಲೀಕರು ಕಟ್ಟಿರುವ ಹಿನ್ನೆಲೆ ಬಾಡಿಗೆದಾರರು ಪರದಾಟ ಅನುಭವಿಸಿದರು. ಮಾಹದೇವಪುರದ ಸ್ಪೈಸ್ ಗಾರ್ಡನ್ ಬಡವಾಣೆಯಲ್ಲಿ ಇಂದು ರಾಜಕಾಲುವೆ ತೆರವಿಗೆ ಪಾಲಿಕೆ ಮುಂದಾಗಿತ್ತು. ಮಾಲೀಕರು ರಾಜಕಾಲುವೇ ಮೇಲೆ ಅಕ್ರಮವಾಗಿ ಪಿಜಿ ಕಟ್ಟಡಗಳನ್ನ ನಿರ್ಮಾಣ ಮಾಡಿದ್ದಾರೆ.
ರಾಜಕಾಲುವೆ ಮೇಲೆ ಅಕ್ರಮವಾಗಿ ನಾಲ್ಕು ಹಾಗೂ ಐದು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಪಾಲಿಕೆ ಒತ್ತುವರಿ ತೆರುವಿಗೆ ಮಾರ್ಕ್ ಮಾಡಲಾಗಿದ್ದು, ಒತ್ತುವರಿ ತೆರವು ಮಾಡುವುದಾಗಿ ಕೂಡಾ ಮೊದಲೆ ಹೇಳಿತ್ತು. ಆದ್ರೆ ಪಿಜಿ ಬಾಡಿಗೆದಾರರಿಗೆ ಈ ಬಗ್ಗೆ ಮಾಲೀಕರು ಯಾವುದೇ ಸೂಚನೆ ನೀಡಿಲ್ಲ. ಈಗ ಪಾಲಿಕೆ ಅಧಿಕಾರಿಗಳು ತೆರವಿಗೆ ಅನೌನ್ಸ್ ಮಾಡ್ತಾ ಇದ್ದಂತೆ ಬಾಡಿಗೆದಾರರು ಪರದಾಟ ನಡೆಸಿದ್ದಾರೆ. ಮಾಹಿತಿ ಇಲ್ಲ ಹೀಗಾ ಏಕಾಏಕಿ ಖಾಲಿ ಮಾಡಿ ಅಂತಿದ್ದಾರೆ ಅಂತಾ ಬೇಸರ ಹೊರ ಹಾಕಿದ್ದಾರೆ.