ಬೆಂಗಳೂರು ;- ಕಾಂಗ್ರೆಸ್ ಎರಡು ದೋಣಿ ಪಾರ್ಟಿ ಎಂದು ಮಾಜಿ ಸಚಿವ ಮುನಿರತ್ನ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಲ್ಲಿನ ಸಿಎಂ ಅಧಿಕಾರ ಹಂಚಿಕೆಯ ಕಥೆ ಮೂಲಕ ಕೌಂಟರ್ ನೀಡಿದ ಮುನಿರತ್ನ ಅವರು, ”ಗ್ಯಾರಂಟಿ ಮಾಡಲು ಸುರ್ಜೇವಾಲ, ವೇಣುಗೋಪಾಲ್ ಬಂದು ಸಭೆ ಮಾಡ್ತಾರೆ. ಅಲ್ಲಿ ಗ್ಯಾರಂಟಿ ಪ್ರಿಂಟ್ ಮಾಡಿ, ಒಬ್ಬರು ಸಹಿ ಮಾಡ್ತಾರೆ. ಆದರೆ ಇನ್ನೊಬ್ಬರು ಸಹಿ ಮಾಡಬೇಕು ಅಂತಾರೆ. ಅಲ್ಲಿ ಶಿವಕುಮಾರ್ ಒಬ್ರು ಇದ್ದು ಸಹಿ ಹಾಕ್ತಾರೆ. ಆದರೆ ಸಿದ್ದರಾಮಯ್ಯ ಇರೋದಿಲ್ಲ. ಕೊನೆಗೆ ಸಿದ್ದರಾಮಯ್ಯ ರನ್ನು ಕರೆಸಿಕೊಂಡು ಅವರಿಂದ ಒಂದು ಸಹಿ ಮಾಡಿ ಅಂತಾರೆ. ಆದರೆ ಸಿದ್ದರಾಮಯ್ಯ ನಾನು ಸಹಿ ಮಾಡಲ್ಲ ಅಂತಾರೆ. ಆಮೇಲೆ ನನ್ನ ಜನರು ಓಡಿಸಿಕೊಂಡು ಬರ್ತಾರೆ ನಾನು ಹಾಕಲ್ಲ ಅಂತಾರೆ. ಆಮೇಲೆ ಅಲ್ಲಿ ಅವರು ಕಂಡಿಷನ್ ಹಾಕ್ತಾರೆ 5 ವರ್ಷ ನಾನೇ ಸಿಎಂ ಅಂತಾ. ಸಿದ್ದರಾಮಯ್ಯ ಮಾತಿಗೆ ವೇಣುಗೋಪಾಲ್, ಸುರ್ಜೇವಾಲ ಒಪ್ಪುತ್ತಾರೆ. ಅಂತಿಮವಾಗಿ ಸಿದ್ದರಾಮಯ್ಯ ಗ್ಯಾರಂಟಿಗೆ ಸಹಿ ಹಾಕ್ತಾರೆ” ಎಂದು ವಿವರಿಸಿದರು.
ಇದು ಮುಚ್ಚಿ ಹೋಗಿರುತ್ತದೆ, ಆಮೇಲೆ ಇದು ಬೂದಿ ಮುಚ್ಚಿದ ಕೆಂಡಂದಂತೆ ಇರುತ್ತದೆ. ಆ ಮೇಲೆ ಎಂ.ಬಿ. ಪಾಟೀಲ್ ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಮಾತು ಶುರು ಮಾಡ್ತಾರೆ. ಆ ನಂತರ ಎಂ.ಬಿ. ಪಾಟೀಲ್ ಗೆ ಬಾಯಿ ಮುಚ್ಚಿಸಿಬಿಟ್ರು. ಪಾಪ ಎಂಬಿಪಿ ಹೆದರಿ ಭಯಗೊಂಡು ಸುಮ್ಮನೆ ಆಗಿ ಬಿಟ್ರು. ಆ ನಂತರ ಸತೀಶ್ ಜಾರಕಿಹೊಳಿ ಶುರು ಮಾಡಿದ್ರು. ಪಾಪ ಶಿವಕುಮಾರ್ ನಾನೇ ಸಿಎಂ ಅಂತಾ ಹೇಳಿಕೊಂಡಿದ್ದಾರೆ. ಅತ್ತ ಸಿದ್ದರಾಮಯ್ಯ ನಾನೇ ಸಿಎಂ ಆಗಿರ್ತೇನೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ನ ಪಾರ್ಟಿ ಎರಡು ದೋಣಿಯ ಪಾರ್ಟಿ. ಆದರೆ, ಬಿಜೆಪಿ ಒಂದು ದೋಣಿಯ ಪಾರ್ಟಿ” ಎಂದು ವಾಗ್ದಾಳಿ ನಡೆಸಿದರು.