ಬೆಂಗಳೂರು:-:ಕಾಂಗ್ರೆಸ್ ಅವಧಿಯಲ್ಲಿ ಪರ್ಸಂಟೇಜ್ ಕಡಿಮೆ ಆಗಿದೆ ಆದ್ರೆ ಎಷ್ಟಾಗಿದೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಕೆಂಪಣ್ಣ ಮತ್ತೆ ಉಲ್ಟಾ ಹೊಡೆದಿದ್ದಾರೆ.
ಗುತ್ತಿಗೆದಾರರರಿಗೆ ಸರ್ಕಾರ 600 ಕೋಟಿ ರಿಲೀಸ್ ಮಾಡಿದ ಬೆನ್ನಲ್ಲೇ ಗುತ್ತಿಗೆ ಸಂಘದ ಅಧ್ಯಕ್ಷ ಕೆಂಪಣ್ಣ
ಎಲ್ಲಾ ಬಾಕಿ ಬಿಲ್ ಕ್ಲಿಯರ್ ಮಾಡುವಂತೆ ಒತ್ತಾಯ ಮಾಡಿದ್ವಿ. ಹಿಂದಿನ ಅವಧಿಯಲ್ಲಿ ಅಷ್ಟೊಂದು ಸ್ಪಂದನೆ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಬಾಕಿ ಬಿಲ್ ಕ್ಲೀಯರ್ ಮಾಡುವ ಬಗ್ಗೆ ಸಿಎಂ, ಡಿಸಿಎಂ ಸಕಾರಾತ್ಮಕ ಸ್ಪಂದನೆ ಕೊಟ್ಟಿದ್ದಾರೆ. ನಮ್ಮ ಪದಾಧಿಕಾರಿಗಳು ಸರ್ಕಾರದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಸರ್ಕಾರ 1054 ಮಂದಿ ಸಣ್ಣ ಗುತ್ತಿಗೆದಾರರಿಗೆ ಫುಲ್ ಕ್ಲೀಯರ್ ಮಾಡಿದೆ. ಒಂದು ಕೋಟಿ ಗುತ್ತಿಗೆದಾರರಿಗೆ ಬಿಲ್ ಕ್ಲೀಯರ್ ಮಾಡಿದೆ. ಒಟ್ಟು 600 ಕೋಟಿ ಈಗಾಗಲೇ ಸರ್ಕಾರ ಬಿಡುಗಡೆ ಮಾಡಿಕೊಟ್ಟಿದೆ. ಆದರೆ ಪ್ಯಾಕೇಜ್ ಗುತ್ತಿಗೆ ಪದ್ಧತಿ ರದ್ದಾಗಬೇಕು ಎನ್ನುವ ನಿಲುವು ಈಗಲೂ ಮುಂದುವರಿದಿದೆ ಎಂದರು.
ಕಳೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ (Congress) ವಿರುದ್ಧ ಕಮಿಷನರ್ ಆರೋಪ ಮಾಡಿದ್ದ ಕೆಂಪಣ್ಣ, ಇದೀಗ ಕಮಿಷನ್ ತೆಗೆದುಕೊಂಡ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು ಸರ್ಕಾರಕ್ಕೆ ಯಾವುದೇ ಕ್ಲೀನ್ ಚಿಟ್ ಕೊಡಲ್ಲ ಎಂದು ಹೇಳುವ ಮೂಲಕ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ನಡೆ ಮುಂದುವರಿಸಿದ್ದಾರೆ.