ಬಾಲಿವುಡ್ ನಟ ರಣ್ಬೀರ್ ಕಪೂರ್ ಸದ್ಯ ‘ರಾಮಾಯಣ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಭರಣ ಮಳಿಗೆಯೊಂದಕ್ಕೆ ರಣಬೀರ್ ಚಾಲನೆ ನೀಡಿದ್ದಾರೆ. ಈ ವೇಳೆ ರಣ್ಬೀರ್ ವೇದಿಕೆ ಮೇಲಿದ್ದಾಗ ಫೋಟೋಗ್ರಾಫರ್ ಅಶ್ಲೀಲ ಪದ ಬಳಸಿ ಮಾತನಾಡಿದ್ದು ಕೇಳಿ ಶಾಕ್ ಆಗಿದ್ದಾರೆ.
ರಣ್ಬೀರ್ ವೇದಿಕೆಗೆ ಎಂಟ್ರಿ ಕೊಟ್ಟಾಗ ಬೇಗನೆ ಫೋಟೋ ಕ್ಲಿಕ್ಕಿಸಬೇಕೆಂಬ ತವಕದಲ್ಲಿದ್ದ ಫೋಟೋಗ್ರಾಫರ್ ಕೆಟ್ಟ ಪದ ಬಳಸಿದ್ದಾರೆ. ಆ ಪದ ಬಳಕೆ ಮಾಡಿದ್ದು, ರಣ್ಬೀರ್ ಅವರಿಗೇನಾ ಅಥವಾ ಸೇರಿದ್ದ ಜನರಿಗೇನಾ? ಎಂದು ಸ್ಪಷ್ಟನೆ ಸಿಕ್ಕಿಲ್ಲ. ಒಟ್ನಲ್ಲಿ ಫೋಟೋಗ್ರಾಫರ್ ವರ್ತನೆ ರಣ್ಬೀರ್ಗೆ ಕೋಪ ತರಿಸಿದೆ.
ರಣ್ಬೀರ್ ಕೂಡ ತಾಳ್ಮೆ ಕಳೆದುಕೊಂಡಿಲ್ಲ. ಖಡಕ್ ಆಗಿ ಲುಕ್ ಕೊಟ್ಟು ವೇದಿಕೆಯಿಂದ ಹೊರನಡೆದಿದ್ದಾರೆ. ವೈರಲ್ ಆಗಿರುವ ವಿಡಿಯೋ ನೋಡಿ ಫೋಟೋಗ್ರಾಫರ್ ವರ್ತನೆಗೆ ಫ್ಯಾನ್ಸ್ ಗರಂ ಆಗಿದ್ದಾರೆ. ಎಲ್ಲಿ ಹೇಗಿರಬೇಕು ಎಂಬ ಸೌಜನ್ಯವಿಲ್ಲ ಎಂದು ಖಡಕ್ ಆಗಿ ಪಾಪರಾಜಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.