ಪತಿಯ ಪ್ರತಿಯೊಂದು ಹಂತದಲ್ಲೂ ಪತ್ನಿಯ ಸಹಕಾರ ಇದ್ದೇ ಇರುತ್ತೆ. ಅಂತದ್ದೇ ಘಟನೆಯೊಂದಕ್ಕೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ವಿಮಾನ ಹಾರಾಟದ ವೇಳೆ ಪೈಲೆಟ್ ಪತಿಗೆ ಹೃದಯಾಘಾತವಾಗಿದ್ದು ಈ ವೇಳೆ ದೈರ್ಯಗೆಡದ ಪತ್ನಿ ವಿಮಾನನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ಅಕ್ಟೋಬರ್ 4ರಂದು ಈ ಘಟನೆ ನಡೆದಿದೆ. ಪೈಲಟ್ ಪತ್ನಿಯ ಮಹಾತ್ಕಾರ್ಯಕ್ಕೆ ಪ್ರತಿಯೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ಟ್ವಿನ್ ಎಂಜಿನ್ ಹೊಂದಿರುವ ಬೀಚ್ಕ್ರಾಫ್ಟ್ ಕಿಂಗ್ ಏರ್ 90 ಕ್ಯಾಲಿಫೋರ್ನಿಯಾದಿಂದ ಮಾಂಟೆರೆ ಕಡೆಗೆ ಸಾಗುತ್ತಿದ್ದಾಘೆ ಈ ಘಟನೆ ಸಂಭವಿಸಿದೆ.
ವಿಮಾನವನ್ನು ಆಲ್ಪರ್ ಎಂಬ ಪೈಲಟ್ ಮುನ್ನಡೆಸುತ್ತಿದ್ದರು. ಆದರೆ ಈ ವೇಳೆ ಏಕಾಏಕಿ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಆತನ ಪತ್ನಿ ಯವೊನ್ನೆ ಕಿನಾನೆ-ವೆಲ್ಸ್ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದ್ದಾರೆ.
ಕಿನಾನೆ ವೇಲ್ಸ್ ಕ್ಯಾಲಿಫೋರ್ನಿಯಾದ ಬೃಏಕರ್ಸ್ಫೀಲ್ಡ್ನಲ್ಲಿರುವ ಮೆಡೋಸ್ ಫೀಲ್ಡ್ ಏರ್ಪೋರ್ಟ್ನಲ್ಲಿ ಏರ್ಟ್ರಾಫಿಕ್ ಕಂಟ್ರೋಲ್ ಸಹಾಯದಿಂದ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ. ಆದರೆ ದುರಾದೃಷ್ಟವಶಾತ್ ಆಕೆಯ ಪತಿ ಅಷ್ಟರಲ್ಲಿ ನಿಧನರಾಗಿದ್ದಾರೆ.