ಬೆಂಗಳೂರು: ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸಬಾರದು ಎಂದು ಕೆಎಂಎಫ್’ಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿ ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರವನ್ನು ಕಡಿತ ಮಾಡದಂತೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. ಏಕಾಏಕಿ ದರ ಕಡಿತ ಮಾಡುವಂತಿಲ್ಲ.
ಬೇಸಿಗೆ ಸಮಯದಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾದ್ದರಿಂದ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ಏಪ್ರಿಲ್ 1ರಿಂದ ಮೇ 31ರವರೆಗೆ ಪ್ರತಿ ಲೀಟರ್ ಹಾಲಿಗೆ ರೂ.2.85 ವಿಶೇಷ ಪ್ರೋತ್ಸಾಹ ಧನ ಘೋಷಿಸಿತ್ತು. ಇದೀಗ ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿ ಹಸಿರು ಮೇವು ಲಭ್ಯವಾಗಿದ್ದು, ಹಾಲಿ ಉತ್ಪಾದನೆ ಹೆಚ್ಚಳವಾಗಿದೆ. ಈ ಕಾರಣಕ್ಕೆ ಪ್ರೋತ್ಸಾಹಧನದಲ್ಲಿ ರೂ.1.50 ಕಡಿತಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಬೆಲೆಯೇರಿಕೆ ಬಿಸಿ ಜನರನ್ನು ನಿರಂತರವಾಗಿ ಸುಡುತ್ತಿದೆ. ಇದರ ಮಧ್ಯೆ ಈಗ ಹಾಲಿನ ದರ (Milk Price) ಏರಿಕೆಯ ಭೀತಿ ಜನರಿಗೆ ಕಾಡುತ್ತಿದೆ. ಯಾಕೆಂದ್ರೆ ಹಾಲು ಒಕ್ಕೂಟಗಳು ನಷ್ಟದ ಕಾರಣಕ್ಕೆ ಎರಡು ತಿಂಗಳಿಂದ ರೈತರಿಗೆ ನೀಡುತ್ತಿದ್ದ ಸಹಾಯಧನವನ್ನು ನಿಲ್ಲಿಸೋಕೆ ತಯಾರಾಗಿದ್ದವು. ಇದಕ್ಕೆ ದೊಡ್ಡ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಿಎಂ (Siddaramaiah) ಸೂಚನೆಯ ಮೇರೆಗೆ ಕಡಿತಗೊಳಿಸಿದ ದರವನ್ನು ಮತ್ತೆ ನೀಡಲು ಒಕ್ಕೂಟಗಳು ಮುಂದಾಗಿದೆ. ಆದರೆ ಸರ್ಕಾರದ ಮುಂದೆ ಈಗ ದರ ಏರಿಕೆಯ ಪ್ರಸ್ತಾವನೆ ಇಡಲು ತಯಾರಾಗಿದೆ. ನಿತ್ಯವೂ 16 ಲಕ್ಷ ನಷ್ಟದಲ್ಲಿ ನಡೆಯುತ್ತಿದೆ. ಇದು ಕೆಎಂಎಫ್ (KMF) ನ ಹಾದಿಗೆ ಕಷ್ಟವಾಗಲಿದೆ. ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳಕ್ಕೆ ಮನವಿ ಮಾಡಲು ನಿರ್ಧಾರ ಮಾಡಲು ನಿರ್ಧರಿಸಿದೆ.
ಹಾಲಿನ ದರ ಏರಿಕೆ ಅನಿವಾರ್ಯತೆ ಅನ್ನೋದು ಹಾಲು ಒಕ್ಕೂಟದ ಮಾತು. ಆದರೆ ಗ್ರಾಹಕರು ಮಾತ್ರ ಇದಕ್ಕೆ ತಯಾರಾಗಿಲ್ಲ. ಅತ್ತ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರ ದರ ಏರಿಕೆಯತ್ತ ಮನಸು ಮಾಡೋದು ಅನುಮಾನ.
ರೈತರ ಏಳಿಗೆ ಹಾಗೂ ಕನ್ನಡಿಗರ ಮನೆಮಾತಾಗಿರುವ ನಂದಿನಿ ನಷ್ಟದ ಹಾದಿಯಲ್ಲಿದೆ ಅನ್ನೋದು ಕೊಂಚ ಶಾಕಿಂಗ್. ರೈತರ ಸಂಸ್ಥೆ ಕನ್ಮಡಿಗರ ಅಸ್ಮಿತೆಯ ಸಂಕೇತವಾಗಿರುವ ಕೆಎಂಎಫ್ ಅನ್ನು ಉದ್ಧಾರ ಮಾಡೋಕೆ ಕೈ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತೆ ಅನ್ನೋದು ನೋಡಬೇಕು.