ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೂರು PARAM ರುದ್ರ ಸೂಪರ್ ಕಂಪ್ಯೂಟರ್’ಗಳಿಗೆ ಚಾಲನೆ ನೀಡಿದ್ದಾರೆ. ರಾಷ್ಟ್ರೀಯ ಸೂಪರ್ಕಂಪ್ಯೂಟಿಂಗ್ ಮಿಷನ್ ಅಡಿಯಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಾಗಿ ಅಭಿವೃದ್ಧಿಪಡಿಸಲಾಗಿದೆ. 130 ಕೋಟಿ ರೂ. ವೆಚ್ಚದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಸೂಪರ್ಕಂಪ್ಯೂಟರ್ಗಳನ್ನು ಪುಣೆ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಅನೇಕ ವೈಜ್ಞಾನಿಕ ವಿಭಾಗಗಳಲ್ಲಿ ಸಂಶೋಧನೆಗಳನ್ನು ನಡೆಸಲು ನಿಯೋಜಿಸಲಾಗಿದೆ.
ಪುಣೆಯಲ್ಲಿರುವ ದೈತ್ಯ ಮೀಟರ್ ರೇಡಿಯೋ ಟೆಲಿಸ್ಕೋಪ್ (GMRT) Fast Radio Bursts (FRBs) ನಂತಹ ಖಗೋಳ ವಿದ್ಯಮಾನಗಳನ್ನು ಅನ್ವೇಷಿಸಲು ಇದನ್ನು ಬಳಕೆ ಮಾಡಲಿದೆ.
ದೆಹಲಿಯ Inter-University Accelerator Centre ನಲ್ಲಿ ವಸ್ತು ವಿಜ್ಞಾನ ಮತ್ತು ಪರಮಾಣು ಭೌತಶಾಸ್ತ್ರದಲ್ಲಿ ಸಂಶೋಧನೆಗೆ ಬಳಕೆಯಾಗಲಿದೆ. ಕೋಲ್ಕತ್ತಾದ ಎಸ್ಎನ್ ಭೋಸ್ ಕೇಂದ್ರದಲ್ಲಿ ಭೌತಶಾಸ್ತ್ರ, ಕಾಸ್ಮೋಲಜಿ, ಭೂ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಮುಂದುವರಿದ ಸಂಶೋಧನೆಗೆ ಬಳಸಲಾಗುತ್ತದೆ.
ಪುಣೆಯಲ್ಲಿರುವ ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC) ನಿಂದ ವಿನ್ಯಾಸಗೊಳಿಸಲ್ಪಟ್ಟ ಮತ್ತು ಜೋಡಿಸಲಾದ ಭಾರತೀಯ ಸೂಪರ್ ಕಂಪ್ಯೂಟರ್ಗಳ ಸರಣಿಯನ್ನು PARAM ಎಂಬ ಹೆಸರಿನಿಂದ ಕರೆಯಲಾಗುತ್ತದೆ.