ಬೆಂಗಳೂರು:- ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ನಿಜ ಎಂಬುವುದು FSL ವರದಿಯಲ್ಲಿ ಬಹಿರಂಗವಾಗಿದೆ. ವರದಿಯ ಬಗ್ಗೆ ಸರ್ಕಾರ ಅಧಿಕೃತವಾಗಿ ಹೇಳಿಲ್ಲ
ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಘೋಷಣೆ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಸರ್ಕಾರ ಎಫ್ಎಸ್ಎಲ್ಗೆ ವಿಡಿಯೋವನ್ನು ಕಳುಹಿಸಿಕೊಟ್ಟಿತ್ತು. ಎಫ್ಎಸ್ಎಲ್ಗೆ ಕಳುಹಿಸಿದ ಬಳಿಕ ಇಲ್ಲಿಯವರೆಗೆ ವಿಡಿಯೋದಲ್ಲಿ ಘೋಷಣೆ ಕೂಗಲಾಗಿದ್ಯಾ? ಇಲ್ಲವೇ? ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ.
ಗೃಹ ಸಚಿವ ಪರಮೇಶ್ವರ್ ಜೊತೆ ಈ ಬಗ್ಗೆ ಕೇಳಿದಾಗ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇನ್ನೂ ಬಂದಿಲ್ಲ. ವರದಿ ಬಂದ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ 7 ಮಂದಿಯನ್ನು ಕರೆದು ತನಿಖೆ ಮಾಡಿ ವಾಯ್ಸ್ ರೆಕಾರ್ಡ್ ಸಹಾ ಮಾಡಿದ್ದೇವೆ. ಧ್ವನಿ ತಾಳೆಯಾಗಬೇಕು. ಒಂದು ವಾಹಿನಿಯದ್ದು ಅಲ್ಲ ಸಾಕಷ್ಟು ಕ್ಲಿಪ್ ಇದೆ. ಎಲ್ಲವನ್ನೂ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಹೇಳಿದ್ದರು