ಚಿತ್ರದುರ್ಗ ;- ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರದ ವಿರುದ್ಧ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆಗೆ ಕರೆ ನೀಡಿತ್ತು.
ಮೊದಲು ಕೇಂದ್ರ ಸರಕಾರದ ವಿರೋಧ ಜಾಥಾವನ್ನು ನಡೆಸಿದರು. ಆದರೆ ಬಹಿರಂಗ ಸಭೆ ನಡೆಯುವ ವೇಳೆಗೆ ಬಿಸಿಲಿನ ತಾಪ ಹೆಚ್ಚಿತ್ತು. ಬಿಸಿಲಿನಿಂದ ತಪ್ಪಿಸಿ ಕೊಳ್ಳಲು ಮಹಿಳಾ ಕಾರ್ಯಕರ್ತರು ಸೀರೆಯನ್ನು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿಯಾಗಿಸಿಕೊಂಡ್ರೆ, ಕಾಂಗ್ರಸ್ ಲೀಡರ್ಗಳು ಟವಲ್ ಮೊರೆ ಹೋದ ದೃಶ್ಯ ಸೆರೆಯಾಯ್ತು.