PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

Shilpa Shetty: ಸತ್ಯವತಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ನಟಿ ಶಿಲ್ಪಾ ಶೆಟ್ಟಿ

March 22, 2023

ತಮಿಳುನಾಡಿನ ಪಟಾಕಿ ಗೋದಾಮಿನಲ್ಲಿ ಭಾರಿ ಸ್ಫೋಟ: 7 ನಿಧನ

March 22, 2023

ಕೋವಿಡ್ ಪ್ರಕರಣ ಸಂಖೆ ಹೆಚ್ಚಳ: ಮೋದಿಯಿಂದ ಉನ್ನತ ಮಟ್ಟದ ಸಭೆ

March 22, 2023
Facebook Twitter Instagram
Thursday, March 23
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » Husband-wife.. ಗಂಡ-ಹೆಂಡತಿ ನಡುವೆ ಆರಂಭವಾದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ..!
ರಾಷ್ಟ್ರೀಯ Prajatv KannadaBy Prajatv KannadaFebruary 25, 2023

Husband-wife.. ಗಂಡ-ಹೆಂಡತಿ ನಡುವೆ ಆರಂಭವಾದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ..!

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಸೂರತ್​: ಗಂಡ-ಹೆಂಡತಿ ಮಧ್ಯೆ ಜಗಳ ನಡೆಯೋದು ಕಾಮನ್‌. ವರದಕ್ಷಿಣೆ ವಿಚಾರಕ್ಕೆ, ಮನೆ ಕೆಲಸದ ವಿಚಾರಕ್ಕೆ ಆಗಾಗ ಜಗಳವಾಗ್ತಾನೆ ಇರುತ್ತೆ. ಕೆಲವೊಮ್ಮೆ ಗಂಭೀರ ವಿಚಾರಗಳಿಗೂ ಪತಿ-ಪತ್ನಿ ಕಿತ್ತಾಡ್ತಾರೆ. ವಿಷಯ ಡಿವೋರ್ಸ್ ವರೆಗೂ ಹೋಗಿಬಿಡುತ್ತದೆ. ಕೆಲವೊಮ್ಮೆ ಅನೈತಿಕ ಸಂಬಂಧದ ವಿಚಾರಕ್ಕೆ ನಡೆಯೋ ಜಗಳ ಕೊಲೆಯಲ್ಲೂ ಅಂತ್ಯವಾಗುತ್ತೆ. ಹಾಗೆಯೇ  ಪೋರ್ನ್​ ವಿಡಿಯೋಗಳನ್ನು ನೋಡುವ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ಆರಂಭವಾದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಗುಜರಾತಿನ ಸೂರತ್​ನಲ್ಲಿ ನಡೆದಿದೆ.

ಕತರ್​ಗಮ್​ ಮೂಲದ ಕಿಶೋರ್​ ಪಟೇಲ್​ (33) ಎಂಬಾತ ತನ್ನ ಪತ್ನಿಯ ಕಾಜಲ್​ (30) ಎಂಬಾಕೆಯನ್ನು ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕಿಶೋರ್ ರಾತ್ರಿ ತನ್ನ ಮೊಬೈಲ್​ನಲ್ಲಿ ಪೋರ್ನ್​ ವಿಡಿಯೋಗಳನ್ನು ನೋಡುತ್ತಿದ್ದ. ಇದನ್ನು ಗಮನಿಸಿದ ಪತ್ನಿ ಅಂತಹ ವಿಡಿಯೋಗಳನ್ನು ನೋಡುವುದನ್ನು ನಿಲ್ಲಿಸು ಎಂದು ಸಲಹೆ (Suggestion) ನೀಡಿದ್ದಾಳೆ. ಆದರೆ, ಪತ್ನಿಯ ಮಾತಿಗೆ ಕ್ಯಾರೆ ಎನ್ನದ ಕಿಶೋರ್​ ವಿಡಿಯೋ ನೋಡುವುದನ್ನು ಮುಂದುವರಿಸಿದ್ದಾನೆ ಇದೇ ವಿಚಾರಕ್ಕೆ ಇಬ್ಬರ ನಡುವೆ ಭಾರೀ ವಾಗ್ವಾದ ನಡೆದಿದೆ. ಇಬ್ಬರೂ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಮರುದಿನವೂ ಮತ್ತೆ ಇದೇ ವಿಚಾರಕ್ಕೆ ಗಂಡ-ಹೆಂಡತಿ (Husband-wife) ಕಿತ್ತಾಡಿಕೊಂಡಿದ್ದಾರೆ.

ಈ ವೇಳೆ ಇಬ್ಬರ ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿ, ತಾಳ್ಮೆ ಕಳೆದುಕೊಂಡ ಕಿಶೋರ್​, ಪತ್ನಿಗೆ ಬೆಂಕಿ ಹಚ್ಚಿ ಕೊಲೆ (Murder) ಮಾಡಿದ್ದಾನೆ. ಶೇ. 40 ಸುಟ್ಟ ಗಾಯಗಳಿಂದ ನರಳುತ್ತಿದ್ದ ಕಾಜಲ್‌ನ್ನು ಮೊದಲು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕಾಜಲ್​ ಕೊನೆಯುಸಿರೆಳೆದಳು. ಸಾವಿಗೂ ಮುನ್ನ ಪೊಲೀಸರ ಮುಂದೆ ಕಾಜಲ್​ ಹೇಳಿಕೆ ನೀಡಿದ್ದು, ಅದರ ಆಧಾರದ ಮೇಲೆ ಕಿಶೋರ್​ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ.

ಆರೋಪಿ ಕಿಶೋರ್​ ಗುಜರಾತಿನ ಪಠಾಣ್​ ಮೂಲದವನು. ಕಾಜಲ್​ ಮುಂಬೈ ಮೂಲದವಳು. ಇಬ್ಬರು ಒಂದು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಮುಂಬೈನ ಡೈಮಂಡ್​ ಆಭರಣ ಫ್ಯಾಕ್ಟರಿಯಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಇಬ್ಬರ ನಡುವೆ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿತ್ತು. ನಂತರ ಇಬ್ಬರೂ ಮನೆಯವರ ಒಪ್ಪಿಗೆ ಪಡೆದು ಮದುವೆ ಆಗಿದ್ದರು. ಕಾಜಲ್​ಗೆ ಇದು ಎರಡನೇ ಮದುವೆ ಆಗಿತ್ತು. ಆಕೆಯ ಮೊದಲ ಗಂಡ 5 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Share. Facebook Twitter WhatsApp Pinterest LinkedIn Tumblr Telegram Email

Related Posts

ತಮಿಳುನಾಡಿನ ಪಟಾಕಿ ಗೋದಾಮಿನಲ್ಲಿ ಭಾರಿ ಸ್ಫೋಟ: 7 ನಿಧನ

March 22, 2023

ಕೋವಿಡ್ ಪ್ರಕರಣ ಸಂಖೆ ಹೆಚ್ಚಳ: ಮೋದಿಯಿಂದ ಉನ್ನತ ಮಟ್ಟದ ಸಭೆ

March 22, 2023

ಆಮ್ ಆದ್ಮಿ ಪಕ್ಷದ ನಾಯಕ ಸಿಸೋಡಿಯಾಗೆ 2 ವಾರಗಳ ನ್ಯಾಯಾಂಗ ಬಂಧನ

March 22, 2023

ಏರ್ ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ಜಿರಳೆಗಳು..! ಟ್ವೀಟ್ ಮಾಡಿ ಆಕ್ರೋಶ

March 22, 2023

Modi Wishes: ನಾಡಿನ ಸಮಸ್ತ ಜನತೆಗೆ ಕನ್ನಡದಲ್ಲೇ ಯುಗಾದಿ ಶುಭಾಶಯ ತಿಳಿಸಿದ ಮೋದಿ

March 22, 2023

Transgender.. ಮೊದಲ ತೃತೀಯಲಿಂಗಿ ವಕೀಲೆ ಪದ್ಮಾ ಲಕ್ಷ್ಮಿ: ಶುಭ ಹಾರೈಸಿದ ಕಾನೂನು ಸಚಿವ

March 22, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.