ಆನೇಕಲ್:– ಬೆಂಗಳೂರು ಹೊರ ವಲಯದ ಆನೇಕಲ್ ನಲ್ಲಿ ಪುಡಿ ರೌಡಿಗಳ ಅಟ್ಟಹಾಸ ನಿಲ್ಲುತ್ತಿಲ್ಲ. ಬೈಕ್ ಗುದ್ದಿದ್ದನ್ನ ಪ್ರಶ್ನಿಸಿದಕ್ಕೆ ಡ್ರ್ಯಾಗರ್ ನಿಂದ ಡೆಡ್ಲಿ ಅಟ್ಯಾಕ್ ನಡೆದ ಘಟನೆ ಜರುಗಿದೆ.
ಲಾ ಅಂಡ್ ಆರ್ಡರ್ ಭಯವಿಲ್ಲದೆ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಆನೇಕಲ್ ಬಸ್ ನಿಲ್ದಾಣದ ಮುಂಭಾಗ ನಡೆದ ಘಟನೆ ಜರುಗಿದೆ.
ಆನೇಕಲ್ ಟೌನ್ ನಿವಾಸಿ ಮೋಹನ್ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಬೈಕ್ ನಲ್ಲಿ ಬರುವಾಗ ಅತಿವೇಗವಾಗಿ ಬಂದು ಪುಡಿರೌಡಿಗಳು ಗೆದ್ದಿದ್ದಾರೆ. ಇದನ್ನು ಪ್ರಶ್ನಿಸಿದ ಮೋಹನ್ ಎಂಬಾತನ ಮೇಲೆ ಏಕಾಏಕಿ ಅಟ್ಯಾಕ್ ನಡೆದಿದೆ.
ಏಕಾಏಕಿ ಡ್ರ್ಯಾಗರ್ ತೆಗೆದು ಮೋಹನ್ ಕೈಗೆ ಪುಂಡರು ಹಾಕಿದ್ದಾರೆ. ಪುಡಿರೌಡಿಗಳನ್ನ ಹಿಡಿದುಕೊಳ್ಳಲು ಜನತೆ ಮುಂದಾಗಿದ್ದಾರೆ. ಈ ವೇಳೆ ಮೋಹನ್ ಸೇರಿದಂತೆ ಅಲ್ಲಿದ್ದ ಜನರ ಕಣ್ಣಿಗೆ ಪುಂಡರು ಪೆಪ್ಪರ್ ಸ್ಪ್ರೇ ಹೊಡೆದಿದ್ದಾರೆ. ಡ್ರ್ಯಾಗರ್ ನಿಂದ ಸಿಕ್ಕಸಿಕ್ಕವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದೇ ವೇಳೆ ಓರ್ವ ಪುಡಿ ರೌಡಿಯನ್ನ ಸ್ಥಳೀಯ ಜನ ಹಿಡಿದುಕೊಂಡಿದ್ದಾರೆ. ಮತ್ತೋರ್ವ ಅಲ್ಲಿಂದ ಪರಾರಿ ಆಗಿದ್ದಾರೆ.
ಗಾಯಗೊಂಡ ಮೋಹನ್ ಗೆ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆನೇಕಲ್ ನಲ್ಲಿ ಕ್ರೈಂ ಕಂಟ್ರೋಲ್ ಗೆ ಸಿಗ್ತಿಲ್ಲ. ಆನೇಕಲ್ ಭಾಗದಲ್ಲಿ ಕ್ಷುಲ್ಲಕ ಕಾರಣಗಳಿಗೆ ನಡೆಯುತ್ತಿದೆ ಕೊಲೆ, ಕೊಲೆ ಯತ್ನ ಪ್ರಕರಣ ನಡೆಯುತ್ತಿದೆ. ಪುಡಿ ರೌಡಿಗಳು ಮತ್ತು ಪಾತಕಿಗಳಿಗೆ
ಪೊಲೀಸರ ಭಯ ಇಲ್ಲ. ಸಣ್ಣ ಸಣ್ಣ ವಿಚಾರಕ್ಕೂ ಮಾರಕಾಸ್ತ್ರಗಳಿಂದ ದಾಳಿ ಕಂಡು ಜನತೆ ಬೆಚ್ಚಿದ್ದಾರೆ.
ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.