ಬೆಂಗಳೂರು: ಬಿಎಂಆರ್ ಸಿಎಲ್ ಮಾಡ್ತಿದ್ದ ಮಂದಗತಿಯ ಕಾಮಗರಿಗೆ ವಾಹನ ಸವಾರರು ನಿತ್ಯ ಒದ್ದಾಡ್ತಿದ್ರು. ಕಳೆದ 5 ವರ್ಷದಿಂದ ಪ್ರಮುಖ ರಸ್ತೆಯೇ ಕ್ಲೋಸ್ ಆಗಿ ಪರದಾಡ್ತಿದ್ರು. ಈಗ ಬರೊಬ್ಬರಿ 5 ವರ್ಷದ ಬಳಿಕ ಜನರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಮುಚ್ಚಿದ್ದ ರಸ್ತೆ ಓಪನ್ ಮಾಡಲು ಬಿಎಂಆರ್ ಸಿಎಲ್ ಮುಂದಾಗಿದೆ.
2019ರಲ್ಲಿ ಕರ್ಷಿಯಲ್ ಸ್ಟ್ರೀಟ್ ನಿಂದ ಬ್ರಿಗೆಡ್ ರೋಡ್ ಗೆ ಹೋಗುವ ರಸ್ತೆ ಕ್ಲೋಸ್ ಆಗಿತ್ತು. ಮೆಟ್ರೋದ ಗುಲಾಬಿ ಮಾರ್ಗದ ಎಂಜಿ ರಸ್ತೆಯ ಕಬ್ಬನ್ ಉದ್ಯಾನ ನಡುವೆ ಭೂಗತ ಕಾಮಗಾರಿ ಹಿನ್ನೆಲೆ ಬಂದ್ ಆಗಿದ್ರಿಂದ ಸವಾರರು ನಿತ್ಯ ಪರದಾಟ ನಡೆಸುತ್ತಿದ್ರು. ಈಗ ವಾಹನ ಸವಾರರು ಖುಷಿ ಪಡುವ ಸುದ್ದಿಯೊಂದನ್ನ ಬಿಎಂಆರ್ ಸಿಎಲ್ ನೀಡಿದೆ. ಬರೊಬ್ಬರಿ 5 ವರ್ಷದ ಬಳಿಕ ರಸ್ತೆ ಮತ್ತೆ ಓಪನ್ ಆಗ್ತಿದೆ.
ಈ ಗುಲಾಬಿ ಮಾರ್ಗದ ಅಂಡರ್ ಗ್ರೌಂಡ್ ಮೆಟ್ರೋ ನಿಲ್ದಾಣವು ನೇರಳೆ ಮಾರ್ಗದೊಂದಿಗೆ ಇಂಟರ್ಚೇಂಜ್ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಕಾಮರಾಜ್ ರಸ್ತೆ ಬಂದ್ ಆಗ ಪರಿಣಾಮ ಸವಾರರು, ಶಿವಾಜಿನಗರ ಅಥವಾ ಕಮರ್ಷಿಯಲ್ ಸ್ಟ್ರೀಟ್ಗೆ ತೆರಳಲು ಅನಿಲ್ ಕುಂಬ್ಳೆ ವೃತ್ತ ಅಥವಾ ಟ್ರಿನಿಟಿ ವೃತ್ತದವರೆಗೆ ಹೋಗಿ ತಿರುವು ಪಡೆದು ಬರಬೇಕಿತ್ತು. ಇದರಿಂದ ಟ್ರಾಫಿಕ್ ಆಗಿ ಸವಾರರು ಹಿಡಿಶಾಪ ಹಾಕ್ತಾ ಓಡಾಡ್ತಿದ್ರು.
ಈಗ ಈ ರಸ್ತೆಯನ್ನ ಏಕಮುಖ ರಸ್ತೆಯನ್ನಾಗಿ ಮಾಡಲು ಸಂಚಾರ ಪೊಲೀಸರು ನಿರ್ಧಾರ ಮಾಡಿದ್ದಾರೆ. ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆ ಕಡೆಗೆ ಸಂಚರಿಸುವ ವಾಹನಗಳಿಗೆ ಈ ಕಾಮರಾಜ್ ರಸ್ತೆ ಲಭ್ಯವಾಗುವಂತೆ ಮಾಡಲು ಪೊಲೀಸರು ಹಾಗೂ ನಮ್ಮ ಮೆಟ್ರೋ ಪ್ಲಾನ್ ಮಾಡಿದೆ.ಇ ನ್ನೊಂದು ತಪಾಸಣೆ ಬಳಿಕ ಸಂಚಾರಿ ಪೊಲೀಸರು ರಸ್ತೆ ಒಪನ್ ಮಾಡಲು ಮುಂದಾಗಿದ್ದಾರೆ. ಎರಡು ಬದಿಯ ಈ ರಸ್ತೆಯಲ್ಲಿ ಒಂದು ಬದಿಯ 8 ಮೀಟರ್ ಅಗಲದ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಆದರೆ ಒನ್ ವೇ ಬೇಡಾ ಎರಡು ಕಡೆ ಒಪನ್ ಮಾಡಿ ಅಂತಿದ್ದಾರೆ ವಾಹನ ಸಾವರರು. ಒಟ್ಟಾರೆ 5 ವರ್ಷ ಕ್ಲೋಸ್ ಆಗಿದ್ದ ರಸ್ತೆ ಓಪನ್ ಆಗ್ತಿದ್ದು ಈ ಭಾಗದ ಟ್ರಾಫಿಕ್ ಗೆ ಕಡಿವಾಣ ಹಾಕುವ ನಿರೀಕ್ಷೆಯಿದೆ. ಎರಡು ಕಡೆ ಓಪನ್ ಮಾಡಿ ಅನ್ನೋ ಬೇಡಿಕೆ ನಮ್ಮ ಮೆಟ್ರೋ ಇಡೇರಿಸುತ್ತಾ ಕಾದು ನೋಡಬೇಕಿದೆ.