ದೊಡ್ಡ ಗುಣಗಳನ್ನು ಹೊಂದಿರುವ ದೊಡ್ಡ ಪತ್ರೆ, ಇದನ್ನು ಸಾಂಬಾರ ಸೊಪ್ಪು ಎಂದು ಕರೆಯುತ್ತಾರೆ. ಇದನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಎಲೆಗಳು ಅಚ್ಚು ಹಸಿರು ಬಣ್ಣದಲ್ಲಿದ್ದು ದಪ್ಪವಾಗಿರುತ್ತವೆ. ಹಾಗು ಕಡು ಸುವಾಸನೆಯನ್ನು ಹೊಂದಿರುತ್ತದೆ. ದೊಡ್ಡ ಪತ್ರೆಯ ಗಿಡವು ಮೃದುವಾಗಿದ್ದು, ರೆಂಬೆ ಮತ್ತು ಹೂವುಗಳು ಚಿಕ್ಕದಾಗಿರುತ್ತವೆ. ಇದನ್ನು ಆಹಾರ ಪದಾರ್ಥಗಳಲ್ಲಿ ತಂಬುಳಿ, ಗೊಜ್ಜು, ಚಟ್ನಿ, ಮಾಡಲು ಹೆಚ್ಚಾಗಿ
ದೊಡ್ಡ ಪತ್ರೆಯಿಂದ ಜ್ವರ, ಶೀತ, ಕೆಮ್ಮು, ಗಂಟಲು ನೋವುಗಳ ನಿವಾರಣೆ.
ದೊಡ್ಡಪತ್ರೆಯು ಕಫ ಕರಗಿಸುವ ಗುಣವನ್ನು ಹೊಂದಿದ್ದು, ಇದರ ಎಲೆಯನ್ನು ಬಿಸಿ ಮಾಡಿ, ಅದರ ರಸವನ್ನು ತೆಗೆದು, ಜೇನು ತುಪ್ಪದೊಡನೆ ಸೇವಿಸಿದರೆ, ಜ್ವರ, ಶೀತ, ಕೆಮ್ಮು, ಗಂಟಲು ನೋವುಗಳು ನಿವಾರಣೆಯಾಗುತ್ತವೆ.
ಮಕ್ಕಳಿಗೆ ಜ್ವರ ಬಂದಾಗ, ದೊಡ್ಡಪಾತ್ರೆಯ ಎಲೆಯನ್ನು ಸ್ವಲ್ಪ ಬಾಡಿಸಿ, ನೆತ್ತಿಯ ಮೇಲೆ ಇತ್ತು ಕಟ್ಟಿ ಮಲಗಿಸಿದರೆ, ಜ್ವರ ಕಡಿಮೆಯಾಗುತ್ತದೆ.
ಚಿಕ್ಕ ಮಕ್ಕಳಲ್ಲಿ ಕಫ ನಿವಾರಣೆಗೆ ದೊಡ್ಡಪತ್ರೆ
ಚಿಕ್ಕ ಮಕ್ಕಳಲ್ಲಿ ಕಫ ದ ಪ್ರಮಾಣಕಡಿಮೆ ಮಾಡಲು, ದೊಡ್ಡಪತ್ರೆ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ, ರಸ ತೆಗೆದು, ಅದನ್ನು ಜೇನು ತುಪ್ಪದಲ್ಲಿ ಸೇರಿಸಿ, ಕುಡಿಸುವುದರಿಂದ ಕಫ ವಾಂತಿ ಅಥವಾ ಭೇದಿಯ ಮೂಲಕ ಹೊರ ಹೋಗುತ್ತದೆ.
ವಾರದ ವರೆಗೆ ಪ್ರತಿದಿನ ಸೇವಿಸುವುದರಿಂದ ಹಳದಿ ಕಾಮಾಲೆ ರೋಗ
ಕಡಿಮೆಯಾಗುತ್ತದೆ.
ಅಜೀರ್ಣ ಸಮಸ್ಯೆಗೆ ದೊಡ್ಡ ಪತ್ರೆಯಿಂದ ಪರಿಹಾರ.
ದೊಡ್ಡ ಪತ್ರೆಯ ಹಸಿ ಎಲೆಯ ಜೊತೆ, ಉಪ್ಪು ಸೇರಿಸಿ, ಜಗಿದು ತಿನ್ನುವುದರಿಂದ ಅಜೀರ್ಣವನ್ನು ಹೋಗಲಾಡಿಸಬಹುದು.
ದೊಡ್ಡ ಪತ್ರೆ ಚರ್ಮದ ಮೇಲಿನ ಉರಿ ಕಡಿಮೆ ಮಾಡಲು ದೊಡ್ಡಪತ್ರೆಯ ಉಪಯೋಗ
ದೊಡ್ಡಪತ್ರೆಯ ಎಲೆಯನ್ನು ನೀರಿಗೆ ಹಾಕಿ ಕುದಿಸಬೇಕು, ನಂತರ ಅದಕ್ಕೆ ಸ್ವಲ್ಪ ಕೆಂಪು ಕಲ್ಲುಸಕ್ಕರೆ ಹಾಕಿ, ಕಷಾಯ ತಯಾರಾದ ನಂತರ, ಒಂದು ಚಿಟಿಕೆ ಏಲಕ್ಕಿ ಪುಡಿ ಹಾಕಿ, ನಂತರ ಸೋಸಿಕೊಂಡು ಉಗುರುಬೆಚ್ಚಗಿರುವಾಗ ಕುಡಿಯಬೇಕು. ಇದರಿಂದ ಯಾವುದಾದರು ಆಹಾರದಿಂದ ಚರ್ಮದ ಮೇಲೆ ಉರಿ ಉಂಟಾಗುತ್ತಿದ್ದರೆ ಆ ಉರಿಯು ಕಡಿಮೆಯಾಗುತ್ತದೆ.