ಬೆಂಗಳೂರು ;- ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಒಂದಲ್ಲ ಒಂದು ರೀತಿ ಮಿತಿ ಮೀರುತ್ತಿದೆ. ಅದರ ಭಾಗವಾಗಿ ಗಾಯತ್ರಿನಗರ ಮೊದಲನೇ ಮುಖ್ಯ ರಸ್ತೆಯಲ್ಲಿ ಮಾದಕ ದ್ರವ್ಯದ ನಶೆಯಲ್ಲಿ ನಿಂತಿದ್ದ ಕಾರುಗಳನ್ನು ಪುಂಡರು ಜಖಂಗೊಳಿಸಿದ್ದಾರೆ.
ಹೀಗಾಗಿ ಕಾರುಗಳನ್ನು ಜಖಂಗೊಳಿಸಿದ ಮೂವರು ಯುವಕರನ್ನು ಸ್ಥಳೀಯರೇ ಹಿಡಿದು ತದುಕಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ರಾತ್ರಿಯಾದರೆ ಜಾಲಿ ರೈಡ್ಗಾಗಿ ಹೊರಬೀಳುವ ಈ ನಿಶಾಚರಿ ದುಷ್ಕರ್ಮಿಗಳು ನಿವಾಸಿಗಳ ನೆಮ್ಮದಿಗೆ ಕೊಳ್ಳಿ ಇಟ್ಟು ಹೈರಾಣಾಗಿಸುತ್ತಿರುವುದಂತೂ ಸತ್ಯ. ಹಾಗೇ ಚಂದ್ರು ನಾಯ್ಡು@ ಸೇಟು ಎಂಬ ಕಾರು ಚಾಲಕ ತನ್ನಿಬ್ಬರು ಸ್ನೇಹಿತರ ಜತೆ ಸೇರಿ ಹೀಗೆ ಅವಾಂತರ ಸೃಷ್ಟಿಸಿದ್ದಾನೆ.
ಹಿಂದೆ ಇದೇ ಏರಿಯಾದ ನಿವಾಸಿಯಾಗಿದ್ದ ಈತ ಇತ್ತೀಚೆಗೆ ಸುಬ್ರಮಣ್ಯ ನಗರಕ್ಕೆ ಶಿಫ್ಟ್ ಆಗಿದ್ದ. ಇಂದು ತನ್ನ ಗೆಳೆಯರ ಜೊತೆಗೂಡಿ ಮದ್ಯ ಸೇವಿಸಿ ಐ20 ಕಾರು ಚಲಾಯಿಸಿಕೊಂಡು ಬಂದು ಏರಿಯಾದಲ್ಲಿದ್ದ 12ಕ್ಕೂ ಅಧಿಕ ಕಾರ್, 10ಕ್ಕೂ ಅಧಿಕ ಬೈಕ್ಗಳಿಗೆ ಡಿಕ್ಕಿ ಹೊಡೆದು ಪುಂಡಾಟ ಮೆರೆದಿದ್ದಾನೆ. ರಸ್ತೆ ಬದಿ ನಿಂತಿದ್ದ 20ಕ್ಕೂ ಹೆಚ್ಚು ವಾಹನಗಳನ್ನು ಇವರು ಜಖಂ ಮಾಡಿದ್ದಾರೆ. ಈ ಯುವಕರ ಪುಂಡಾಟ ಹೆಚ್ಚಾದಾಗ ಸ್ಥಳೀಯರೇ ಗಾಡಿಯನ್ನು ಚೇಸ್ ಮಾಡಿ ಹಿಡಿದು ಇಬ್ಬರು ಯುವಕರಿಗೂ ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ