ಮಳೆಗಾಲ ಮುಗೀತು ಬೇಸಿಗೆ ಬಂತು. ಬಿಸಿಲಿಗೆ ಮುಖದ ಟ್ಯಾನ್ ಜಾಸ್ತಿಯಾಯ್ತು ಅಂತ ಬ್ಯೂಟಿ ಪಾರ್ಲರ್ ಗೆ ಹೋಗಿ ಸುಮ್ನೆ ದುಡ್ಡು ಖರ್ಚು ಮಾಡ್ತಿದ್ದೀರಾ? ಸುಮ್ನೆ ಟ್ಯಾನ್ ಗೆಲ್ಲಾ ಯಾಕೆ ದುಡ್ಡು ವೇಸ್ಟ್ ಮಾಡ್ತೀರಿ,ಮನೇಲಿ ಆಲೂಗಡ್ಡೆ ಇರಲ್ವಾ?
ಹ್ಞೂಂ, ಆಲೂಗಡ್ಡೆ ಸಿಪ್ಪೆಯಿಂದ ಟ್ಯಾನ್ ತೆಗೆಯೋಕೆ ಸಾಧ್ಯ ಇದೆ. ಅದ್ಹೇಗೇ ಅಂತೀರಾ? ಆಲೂ ಸಿಪ್ಪೆ ತೆಗೀರಿ. ಸ್ವಲ್ಪ ನೀರು ಸೇರಿಸಿ ,ಮಿಕ್ಸಿಗೆ ಹಾಕಿ ರುಬ್ಬಿ. ಅದಾದ್ಮೇಲೆ ರುಬ್ಬಿದ ಸಿಪ್ಪೆಗೆ ಜೇನುತುಪ್ಪ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಹಾಗೇ ಬಿಡಿ. ಆಮೇಲೆ ಬೆಚ್ಚಗಿರೋ ನೀರಿಂದ ತೊಳೆದುಕೊಳ್ಳಿ. ಹೀಗೆ ಒಂದ್ ದಿನ ಮಾಡಿದ್ರೆ ನೋ ಯೂಸ್. ವಾರಕ್ಕೆ ಒಂದೆರಡು ಬಾರಿ ಮಾಡಿ ನೋಡಿ, ನಿಮ್ಮ ಟ್ಯಾನ್ ಕ್ಲೀಯರ್ ಆಗಿ, ನಿಮ್ಮ ಮುಖದ ತ್ವಚೆ ಹೆಚ್ಚುತ್ತೆ.