ಪಡಿತರ ಕಾರ್ಡ್ಗಳ ತಿದ್ದುಪಡಿಗೆ ಸರ್ವರ್ ಕೈ ಕೊಡುತ್ತಿದ್ದು, ಸಾರ್ವಜನಿಕರು ರೋಸಿ ಹೋಗಿದ್ದಾರೆ. ಬೆಂಗಳೂರು ಒನ್ ಸೆಂಟರ್ಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿದ್ದು, ಫಲಾನುಭವಿಗಳು ಪ್ರತಿದಿನ ಬೆಂಗಳೂರು ಒನ್ ಸೆಂಟರ್ಗಳಲ್ಲಿ ಕಾದು ನಿಂತು ಹೋಗುವ ಪರಿಸ್ಥಿತಿ ಎದುರಾಗಿದೆ.
ಮೂರು ತಿಂಗಳ ಬಳಿಕ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿದ್ದು, ತಿದ್ದುಪಡಿಗೆಂದೆ ಸಮಯ ಕೂಡ ಫಿಕ್ಸ್ ಮಾಡಲಾಗಿದೆ. ಪ್ರತಿದಿನ ಬೆಳ್ಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೂ, ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಆದರೆ ಪ್ರತಿ ದಿನ ಈ ಸಮಯಕ್ಕೆ ಫಲಾನುಭವಿಗಳು ತಿದ್ದುಪಡಿಗೆ ಬಂದ್ರೆ ಸರ್ವರ್ ಸಮಸ್ಯೆ ಎದುರಾಗುತ್ತಿದ್ದು, ಪ್ರತಿದಿನ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮಾಂತರ ಒನ್ ಕೇಂದ್ರಗಳಲ್ಲಿ ಕ್ಯೂ ನಿಲ್ಲುವಂತಾಗಿದೆ. ಇನ್ನು ಈ ತಿದ್ದುಪಡಿ ಸಮಸ್ಯೆಯಿಂದಾಗಿ ಅನ್ನಭಾಗ್ಯದ ಹಣ ಬರುವುದಕ್ಕೂ ಬ್ರೇಕ್ ಬಿದ್ದಿದೆ.
ಹಣವು ಇಲ್ಲದೇ ಅಕ್ಕಿಯು ಇಲ್ಲದೇ ಬಿಪಿಎಲ್ ಫಲಾನುಭವಿಗಳು ಪರದಾಡುವಂತಾಗಿದೆ. ಎಲೆಕ್ಷನ್ ಸಲುವಾಗಿ ಬಿಪಿಎಲ್ ವೆಬ್ ಸೈಟ್ ಅನ್ನ ಸಂಪೂರ್ಣವಾಗಿ ಕ್ಲೋಸ್ ಮಾಡಲಾಗಿತ್ತು. ಇದೀಗಾ ಮೂರು ದಿನದಿಂದ ತಿದ್ದುಪಡಿಗೆ ಅವಕಾಶ ನೀಡಿದ್ದಾರೆ. ಆದರೆ ಪ್ರತಿದಿನ ಸರ್ವರ್ ಸಮಸ್ಯೆಯಾಗುತ್ತಿದ್ದು, ಸಾರ್ವಜನಿಕರಿಗೆ ತುಂಬ ಸಮಸ್ಯೆಯಾಗುತ್ತಿದೆ. ಆಹಾರ ಇಲಾಖೆಗೆ ಹೋದ್ರೆ ಬೆಂಗಳೂರು ಒನ್ ಸೆಂಟರ್ ಗಳಿಗೆ ಹೋಗಿ ಅಂತರೆ. ಇಲ್ಲಿಗೆ ಬಂದ್ರೆ ಸರ್ವರ್ ಸಮಸ್ಯೆ ಅಂತರೇ. ಹೀಗಾದ್ರೆ ನಮ್ಮ