ಬೆಂಗಳೂರು ಗ್ರಾಮಾಂತರ: ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ, ಮಗನೇ ದೊಡ್ಡಪ್ಪನನ್ನ ಕೊಲೆಮಾಡಿರುವ ಘಟನೆ ಜಿಲ್ಲೆಯ ಹೊಸಕೋಟೆ (Hoskote) ತಾಲೂಕಿನ ಡಿ.ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ (56) ಮೃತ ರ್ದುದೈವಿ. ಹೌದು ಮೇ.10 ರಂದು ನಡೆದಿದ್ದ ವಿಧಾನಸಭೆ ಚುನಾವಣೆ ಫಲಿತಾಂಶ ಮೇ.13 ಹೊರಬಿದ್ದಿದೆ.
ಅದರಂತೆ ಕಳೆದ ರಾತ್ರಿ ಚುನಾವಣೆಯಲ್ಲಿ ಓಟ್ ಹಾಕಿಲ್ಲ ಎನ್ನುವ ವಿಚಾರಕ್ಕೆ ಮೃತ ಕೃಷ್ಣಪ್ಪ ಹಾಗೂ ಸಹೋದರ ಗಣೇಶಪ್ಪ ನಡುವೆ ಗಲಾಟೆಯಾಗಿದೆ. ಇದನ್ನ ಗಮನಿಸಿದ ಗಣೆಶಪ್ಪನ ಮಗ ಆದಿತ್ಯಾ ಎಂಬವವನು ದೊಡ್ಡಪ್ಪನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಘಟನೆ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.