ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಘಟನೆಯಲ್ಲಿ ತಾಯಿಯೊಬ್ಬಳು ನನ್ನ ಮಗ ನಾಪತ್ತೆಯಾಗಿದ್ದಾನೆ, ದಯವಿಟ್ಟು ಹುಡುಕಿಕೊಡಿ ಅಂತ ಪೊಲೀಸ್ ಠಾಣೆ ಮೊರೆ ಹೋಗಿದ್ದಾಳೆ.
ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಘಟನೆಯಲ್ಲಿ ದಿನದಿಂದ ದಿನಕ್ಕೆ ಹೊರಬರುತ್ತಿದೆ ನಾಪತ್ತೆ ಯಾದವರ ಹೆಸರು, ಅವರ ಕಣ್ಣೀರಿನ ಕಥೆ ಹೊರ ಬರುತ್ತಿದೆ.
ಗೋಕರ್ಣ ಬಳಿಯ ಗಂಗೆಕೊಳ್ಳದ ಯುವಕ ಓರ್ವ ನಾಪತ್ತೆಯಾಗಿದ್ದಾನೆ. ಲೋಕೇಶ್ ಎಂಬಾತ ನಾಪತ್ತೆಯಾಗಿದ್ದು, ಆತನನ್ನ ಹುಡುಕಿಕೊಡುವಂತೆ ಆತನ ತಾಯಿ ಮಾದೇವಿ ಎಂಬುವರ ಪೊಲೀಸ್ ಠಾಣೆ ಮೆಟ್ಟಿಲೆರಿದ್ದಾರೆ.
ಕಳೆದ ಐದು ದಿನಗಳಿಂದ ಮಗ ಮನೆಗೆ ಬಂದಿಲ್ಲ ಎಂದು ಅಂಕೋಲಾ ಪೊಲೀಸ್ ಠಾಣೆಗೆ ಲೋಕೇಶ್ ತಾಯಿ ಮಾದೇವಿ ದೂರು ನೀಡಿದ್ದಾರೆ. ಗುಡ್ಡ ಕುಸಿತದ ದಿನ ಆ ಹೊಟೇಲ್ನಲ್ಲೆ ಲೋಕೇಶ್ ಇದ್ದ ಎಂಬ ಬಗ್ಗೆ ಮಾಹಿತಿ ಇದೆ. ಅದೇ ಹೋಟೆಲ್ನಲ್ಲಿ ಇದ್ದ ಅಂತ ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಲೋಕೇಶ್ ನಾಪತ್ತೆಯಾಗಿದ್ದಾನೆ ತಾಯಿ ಆತಂಕ ವ್ಯಕ್ತಪಡಿಸಿದ್ದಾರೆ.
ಗೋವಾದಲ್ಲಿ ಬೋಟ್ ರಿಪೇರಿ ಕೆಲಸ ಮಾಡುತ್ತಿದ್ದ ಲೋಕೇಶ್, ಜ್ವರ ಬಂದಿದಕ್ಕೆ ರಜೆ ಪಡೆದು ಮನೆ ಕಡೆ ಬಂದಿದ್ದನಂತೆ. ಗುಡ್ಡ ಕುಸಿತದ ದಿನ ಶೃಂಗೇರಿಗೆ ಹೋಗಿ ಬರುವುದಾಗಿ ಲೋಕೇಶ್ ತೆರಳಿದ್ದನಂತೆ. ಆದರೆ ಲೋಕೇಶ್ ಅತ್ತ ಶೃಂಗೇರಿಗೂ ಹೋಗಿಲ್ಲ, ಇತ್ತ ಗೋವಾ ಕೆಲಸಕ್ಕೂ ಹೋಗಿಲ್ಲವಂತೆ.
ಮಗನ ಬಗ್ಗೆ ಸುಳಿವು ಸಿಗದೇ ತಾಯಿ ಮಾದೇವಿ ಕಂಗಾಲಾಗಿದ್ದಾರೆ. ಕಳೆದ ಐದು ದಿನಗಳಿಂದ ಮಗ ಗೋವಾಕ್ಕೆ ಕೆಲಸಕ್ಕೂ ಹೋಗದೇ, ಶೃಂಗೇರಿಗೂ ಹೋಗದೇ, ಮನೆಗೆ ಬಾರದ್ದಕ್ಕೆ ಕಣ್ಣೀರಿಡುತ್ತಿದ್ದಾರೆ. ಇದರ ನಡುವೆ ಆತನ ಮೊಬೈಲ್ ಸ್ವಿಚ್ಛ್ ಆಫ್ ಆಗಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.