ಬಾಗಲಕೋಟೆ: ದೂರು ಕೊಡಲು ಗುಬ್ಬಚ್ಚಿ (sparrow) ಮರಿಯೊಂದು ಪೊಲೀಸ್ ಸ್ಟೇಷನ್ ಗೆ ಬಂದ ಅಪರೂಪದ ಘಟನೆ ಬಾಗಲಕೋಟೆ ನವನಗರದ ಟ್ರಾಫಿಕ್ ಸ್ಟೇಷನ್ (traffic police station) ನಲ್ಲಿ ನಡೆದಿದೆ. ನೇರವಾಗಿ ಪೊಲೀಸ್ ಠಾಣೆ ಒಳಗೆ ಬಂದು, ಸಿನಿಯರ್ ಹೆಡ್ ಕಾನ್ಸ್ಟೇಬಲ್ ಟೇಬಲ್ ಬಳಿ ಗುಬ್ಬಚ್ಚಿ ಮರಿ ಬಂದು ಕುಳಿತಿತ್ತು.
ಆ ವೇಳೆ ಮಹಿಳಾ ಕಾನ್ಸ್ಟೇಬಲ್ ಗುಬ್ಬಿ ಮರಿ ಜೊತೆ ಕ್ಯೂಟ್ ಆಗಿ ಮಾತಾಡಿದರು. ಯಾರ ಮೇಲೆ ದೂರು ಕೊಡಲು ಬಂದಿದ್ದೀಯಾ ಎಂದು ಪೊಲೀಸ್ ಹೆಡ್ಡ್ ಕಾನ್ಸ್ಟೇಬಲ್ ಗುಬ್ಬಚ್ಚಿ ಮರಿಗೆ ಪ್ರಶ್ನೆಮಾಡಿದರು. ಒಂದು ಗಂಟೆ ಕಾಲ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದ ಗುಬ್ಬಚ್ಚಿ ಮರಿ ಅಲ್ಲಿಂದ ಪುರ್ ಅಂತಾ ಹೊರಗೆ ಹಾರಿಹೋಯಿತು. ಠಾಣೆಗೆ ಬಂದ ಗುಬ್ಬಚ್ಚಿ ಮರಿ ಕಂಡು ಪೊಲೀಸರು ಅಚ್ಚರಿ ವ್ಯಕ್ತಪಡಿಸಿದರು.