ರೇಷನ್ ಕಾರ್ಡ್ದಾರರಿಗೆ ಆಹಾರ ಇಲಾಖೆ ಸಿಹಿ ಸುದ್ದಿಯೊಂದನ್ನ ನೀಡಿದೆ. ಹೌದು, ಕಾರ್ಡ್ ಕಳೆದು ಹೋದವರಿಗೆ ಆಹಾರ ಇಲಾಖೆಯಿಂದ ಹೊಸ ಮಾರ್ಗವನ್ನ ಸೂಚಿಸಿದೆ. ರಾಜ್ಯದ ಜನತೆಗೆ ಸಹಾಯ ಆಗುವ ರೀತಿ ಹೊಸ ಮಾರ್ಗವನ್ನ ಸೂಚಿಸಿದೆ. ಪಡಿತರ ಚೀಟಿ ಕಳೆದು ಹೋದ್ರೆ ನಕಲಿ ಚೀಟಿ ಪಡೆಯಬಹುದಾಗಿದೆ. ಕೆಲವೊಂದು ಬಾರಿ ಪಡಿತರ ಕಳ್ಳತನವಾಗುವುದು ಸಹಜ. ಹೀಗಾಗಿ ಹೊಸ ಮಾರ್ಗದ ಮೂಲಕ ನಕಲಿ ಚೀಟಿಯನ್ನ ಪಡೆಯಬಹುದಾಗಿದೆ.
ನಕಲಿ ಪಡಿತರ ಚೀಟಿ ಪಡೆಯುವುದು ಹೇಗೆ?
ರಾಜ್ಯದ ಆಹಾರ ಇಲಾಖೆ ವೆಬ್ಸೈಟ್ಗೆ http://ahara.kar.nic.in/ ಲಾಗಿನ್ ಆಗಿ ನಕಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು. ವೆಬ್ಸೈಟ್ಗೆ ಕ್ಲಿಕ್ ಮಾಡಿದರೆ ಮೊದಲು ಒಂದು ಫಾರ್ಮ್ ಓಪನ್ ಆಗುತ್ತೆ, ಫಾರ್ಮ್ನಲ್ಲಿ ನಿಮ್ಮ ಹೆಸರು, ಪಡಿತರ ಚೀಟಿ, ಸಂಖ್ಯೆ ಮಾಹಿತಿ ನಮೂದು ಮಾಡಿ ಡಾಕ್ಯುಮೆಂಟ್ ನಕಲನ್ನು ಆಪ್ಲೋಡ್ ಮಾಡಬೇಕು.
ಅಪ್ಲೋಡ್ ಮಾಡಿದ ನಂತರ ಸಬ್ಮಿಟ್ ಮಾಡಬೇಕು. ಮಾಹಿತಿ ಸರಿಯಾಗಿದ್ರೆ ಕೆಲವೇ ದಿನದಲ್ಲಿ ಪಡಿತರ ಚೀಟಿ ಲಭ್ಯವಾಗಲಿದೆ. ಬಹುತೇಕ ಮಂದಿ ಪಡಿತರ ಚೀಟಿಯನ್ನ ಕಳೆದುಕೊಂಡಿದ್ದಾರೆ. ಅಂತವರು ಇದನ್ನ ಸದುಪಯೋಗ ಪಡಿಸಿಕೊಳ್ಳಲು ಅಹಾರ ಇಲಾಖೆ ಮನವಿ ಮಾಡಿದೆ.