ಬೆಂಗಳೂರು: ರಾಜ್ಯ ಸರ್ಕಾರದ ಅಸಮರ್ಥ, ಆ್ಯಕ್ಟೀವ್ ಇಲ್ಲದ ಸಚಿವರನ್ನ ಸಂಪುಟದಿಂದ ಕೈಬಿಡುವ ಚಿಂತನೆ ನಡೆದಿದೆ.ಆರೇಳು ಮಂದಿ ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಚರ್ಚೆ ಜೋರಾಗ್ತಿದೆ.ಜನವರಿಯಲ್ಲಿ ಬಹುತೇಕ ಸಂಪುಟ ಪುನಾರಚನೆ ಮಾಡುವ ಚಿಂತನೆ ಸಿಎಂ ಮುಂದಿದೆ ಎನ್ನಲಾಗ್ತಿದೆ.ಜೊತೆಗೆ ಹೈಕಮಾಂಡ್ ಮಟ್ಟದಲ್ಲೂ ಇದು ಮುನ್ನೆಲೆಗೆ ಬಂದಿದೆ.
ಯಸ್..ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರ್ಣಗೊಳಿಸ್ತಿದೆ.ಇದೇ ವೇಳೆ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡುವ ಲಕ್ಷಣಗಳು ಶುರುವಾಗಿವೆ.ಡಿಸೆಂಬರ್ ನಂತರ ಸಂಪುಟ ಪುನಾರಚನೆ ಬಹುತೇಕ ಫಿಕ್ಸ್ ಅಂತ ಹೇಳಲಾಗ್ತಿದೆ.ಮೊನ್ನೆ ನಡೆದ ಹಿರಿಯ ಸಚಿವರ ಸಭೆಯಲ್ಲೂ ಈ ವಿಚಾರ ಪ್ರಸ್ತಾಪ ಆಗಿದ್ದು, ಹಿರಿಯ ಸಚಿವರಿಗೆ ಈ ಬಗ್ಗೆ ಸುಳುವು ನೀಡಿದ್ದಾರೆಂಬ ಮಾತಿದೆ.. ಆರೇಳು ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಸಿಎಂ ಕೂಡ ಮುಕ್ತಮನಸ್ಸಿನಲ್ಲಿದ್ದಾರೆ.ಹೈಕಮಾಂಡ್ ಕೂಡ ಈ ಬಗ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ ಎನ್ನಲಾಗ್ತಿದೆ.
ಇನ್ನು ಸಂಪುಟ ಪುನಾರಚನೆ ಮಾಡಿ ಸುಮಾರು ಆರೇಳು ಸಚಿವರನ್ನ ಕೈಬಿಡೋಕೆ ಸಿಎಂ ಚಿಂತಿಸಿದ್ದಾರೆ.ಮೂಡಾ ಹಗರಣ,ವಕ್ಫ್ ವಿವಾದ,ವಾಲ್ಮೀಕಿ ಹಗರಣಗಳವೇಳೆ ಯಾರು ಸರ್ಕಾರದ ಪರ ಬಂಡೆಯಂತೆ ನಿಂತಿದ್ದಾರೆ ಅಂತವರಿಗೆ ಯಾವುದೇ ಆತಂಕವಿಲ್ಲ..ಇಲಾಖೆಗೆ ನ್ಯಾಯ ಸಲ್ಲಿಸಿದವರಿಗೂ ಭಯವಿಲ್ಲ..ಆದ್ರೆ ಯಾರು ಸಿಎಂ ಕಷ್ಟಕಾಲದಲ್ಲಿ ಧ್ವನಿ ಎತ್ತಿಲ್ಲ..ಪ್ರತಿಪಕ್ಷಗಳ ವಿರುದ್ಧ ತೊಡೆತಟ್ಟಲಿಲ್ಲ ಅಂತವರ ಸ್ಥಾನಗಳಿಗೆ ಕೊಕ್ ಬೀಳುವ ಸಾಧ್ಯತೆಗಳಿವೆ..
ಪರಮೇಶ್ವರ್,ಕೃಷ್ಣಬೈರೇಗೌಡ,ಪ್ರಿಯಾಂಕ್ ಖರ್ಗೆ,ಹೆಚ್.ಕೆ.ಪಾಟೀಲ್,ದಿನೇಶ್ ಗುಂಡೂರಾವ್, ಚೆಲುವರಾಯಸ್ಚಾಮಿ, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ,ಸಂತೋಷ್ ಲಾಡ್,ಈಶ್ವರ್ ಖಂಡ್ರೆ ಸಚಿವ ಸ್ಥಾನಕ್ಕೆ ಯಾವುದೇ ಕುತ್ತಿಲ್ಲ.ಯಾಕಂದ್ರೆ ಇವರೆಲ್ಲರೂ ಸಿಎಂ,ಸರ್ಕಾರದ ಪರ ಎದೆಯುಬ್ಬಿಸಿ ನಿಂತವರು..ಕಷ್ಟಕಾಲದಲ್ಲಿ ಸರ್ಕಾರದ ಸಮರ್ಥನೆಗೆ ನಿಂತವರು.ಇವರ ಸಚಿವ ಸ್ಥಾನಗಳು ಮುಂದುವರಿಯಲಿವೆ ಎನ್ನಲಾಗ್ತಿದೆ.ಇನ್ನು ಹೈಕಮಾಂಡ್ ಕೃಪಾಕಟಾಕ್ಷ ಇರುವ ಸತೀಶ್ ಜಾರಕಿಹೊಳಿ,ಕೆ.ಜೆ.ಜಾರ್ಜ್,ಎಸ್.ಮಲ್ಲಿಕಾರ್ಜುನ್,ಮಹದೇವಪ್ಪ ಸ್ಥಾನಗಳು ಹಾಗೆಯೇ ಉಳಿಯಲಿವೆ ಎಂಬ ಮಾತಿದೆ ಎನ್ನಲಾಗಿದೆ.
ಇನ್ನು ಸರ್ಕಾರದ ಬೆನ್ನಿಗೆ ನಿಲ್ಲದವರು ಹಾಗೂ ಇಲಾಖೆಗೂ ಸರಿಯಾದ ನ್ಯಾಯ ಕೊಡದ ಸಚಿವರನ್ನ ಸಂಪುಟದಿಂದ ಕೈಬಿಡಲಾಗುತ್ತೆ ಎಂಬ ಮಾತುಗಳಿವೆ.ಅಬಕಾರಿ ಲಂಚ ಪ್ರಕರಣದಲ್ಲಿ ಆರೋಪ ಕೇಳಿಬಂದ ಆರ್.ಬಿ.ತಿಮ್ಮಾಪೂರ,ಇಲಾಖೆಗೆ ನ್ಯಾಯ ಸಲ್ಲಿಸ್ತಿಲ್ಲವೆಂಬ ಕಾರಣಕ್ಕೆ ಡಿ.ಸುಧಾಕರ್,ಕೆ.ವೆಂಕಟೇಶ್,ಬೋಸರಾಜ್,ಕೆ.ಹೆಚ್.ಮುನಿಯಪ್ಪ ಹೆಸರುಗಳು ಮುನ್ನೆಲೆಗೆ ಬಂದಿವೆ.ವಕ್ಫ್ ವಿವಾದಕ್ಕೆ ಕಾರಣರಾದ ಜಮೀರ್ ಹಾಗೂ ಕೆ.ಎನ್.ರಾಜಣ್ಣಗೂ ಕೊಕ್ ಬೀಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.ಇನ್ನು ನರೇಂದ್ರ ಸ್ವಾಮಿ,ಮಾಗಡಿ ಬಾಲಕೃಷ್ಣ,ಲಕ್ಷ್ಮಣ್ ಸವದಿ,ವಿಜಯಾನಂದ ಕಾಶಪ್ಪನವರ್,ತಿಪಟೂರುಷಡಕ್ಷರಿ,ಪ್ರಸಾದ್ ಅಬ್ಬಯ್ಯ,ಅಜಯ್ ಸಿಂಗ್ ಗೆ ಸಂಪುಟದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಟ್ನಲ್ಲಿ ಇಲಾಖೆಗಳಲ್ಲಿ ಹಗರಣ, ವಿವಾದಗಳಲ್ಲಿ ಸಿಲುಕಿರೋ ಸಚಿವರನ್ನ ಸಂಪುಟದಿಂದ ಕೈಬಿಡಬೇಕು ಅನ್ನೋ ಆಗ್ರಹವಿದೆ.ಜೊತೆಗೆ ವಯೋ ಸಮಸ್ಯೆ ಇರುವ ಸಚಿವರು, ಇಲಾಖೆಯಲ್ಲಿ ಬದಲಾವಣೆ ತರದ ಅಸಮರ್ಥ ಸಚಿವರಿಗೆ ಕೊಕ್ ಗ್ಯಾರಂಟಿ ಅಂತಾ ತಿಳಿದು ಬಂದಿದೆ.ಎಐಸಿಸಿ ವರಿಷ್ಠರು ಕೂಡ ಆಗಿಂದಾಗ್ಗೆ ಸಚಿವರ ರಿಪೋರ್ಟ್ ಕಾರ್ಡ್ ಪಡೆದು, ಪರಾಮರ್ಶೆ ನಡೆಸಿದ್ದಾರೆ.ಈ ಹಿನ್ನಲೆಯಲ್ಲಿ ಜನವರಿಯಲ್ಲಿ ಕೆಲ ಸಚಿವರು ಸಂಪುಟದಿಂದ ಆಚೆ ಹೋಗೋದು ಖಚಿತವಾಗಿದೆ.