ಬೆಂಗಳೂರು: ಕರ್ನಾಟಕದ ಮೊದಲ ಹಂತದ ಚುನಾವಣಾ ಪ್ರಚಾರ ಕೊನೆಯ ಹಂತಕ್ಕೆ ಬಂದು ನಿಂತಿದೆ, ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳ್ತಿದ್ದು, ಘಟಾನುಘಟಿ ನಾಯಕರು ಅಬ್ಬರದ ಪ್ರಚಾರ ನಡೆಸಿದ್ರು. ಮತದಾರರ ಮನವೊಲಿಸಲು ಕಾಂಗ್ರೆಸ್- ಬಿಜೆಪಿ ಎರಡೂ ಪಕ್ಷಗಳು ತಮ್ಮ ಸ್ಟಾರ್ ನಾಯಕರಿಂದ ಕಸರತ್ತು ನಡೆಸಿದ್ರು. ಕಾಂಗ್ರೆಸ್ ಅಧಿನಾಯಕಿ ಪ್ರಿಯಾಂಕಾ ಗಾಂಧಿ ಚಿತ್ರದುರ್ಗ, ಬೆಂಗಳೂರಿನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾದ್ರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನಲ್ಲಿ ಮೆಗಾ ರೋಡ್ ಶೋ ನಡೆಸಿದ್ರು.
ಶುಕ್ರವಾರ ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಎಲ್ಲಾ ಪಕ್ಷಗಳು ಕಳೆದ 15 ದಿನಗಳಿಂದ ಅಬ್ಬರದ ಪ್ರಚಾರ ನಡೆಸಿದ್ರು. ಇಂದು ಅಬ್ಬರದ ಪ್ರಚಾರಕ್ಕೆ ತೆರೆ ಬೀಳ್ತಿದ್ದು ಕೊನೆಯ ಕ್ಷಣದಲ್ಲಿ ಮತದಾರರ ಮನವೊಲಿಸಲು ಕಾಂಗ್ರೆಸ್- ಬಿಜೆಪಿಯ ರಾಷ್ಟ್ರೀಯ ನಾಯಕರು ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ನಿನ್ನೆ ಕಾಂಗ್ರೆಸ್ ಅಧಿನಾಯಕಿ ಪ್ರಿಯಾಂಕಾ ಗಾಂಧಿ ಚಿತ್ರದುರ್ಗ, ಬೆಂಗಳೂರಿನಲ್ಲಿ ಸಮಾವೇಶ ನಡೆಸಿ ಮತಭೇಟೆ ನಡೆಸಿದ್ರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನಲ್ಲಿ ಮೆಗಾ ರೋಡ್ ಶೋ ನಡೆಸಿದ್ರು.
ಕಾಂಗ್ರೆಸ್ ಅಧಿನಾಯಕಿ ಪ್ರಿಯಾಂಕಾ ಗಾಂಧಿ ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಪರವಾಗಿ ಬೃಹತ್ ಸಮಾವೇಶದಲ್ಲಿ ಅಬ್ಬರದ ಪ್ರಚಾರ ನಡೆಸಿದ್ರು. ಪ್ರಿಯಾಂಕಾ ಗೆ ಸಿಎಂ ಸಿದ್ದರಾಮಯ್ಯ, ರಾಜ್ಯ ಕೈ ಉಸ್ತುವಾರಿ ಸುರ್ಜೆವಾಲ ಸೇರಿ ಹಲವರು ಸಾಥ್ ನೀಡಿದ್ರು. ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ರು. ಇವತ್ತು ದೇಶದಾದ್ಯಂತ ಅನ್ಯಾಯಗಳ ನಡೆಯುತ್ತಿವೆ.
ಪ್ರತಿ ನಿತ್ಯ ಬೆಲೆ ಏರಿಕೆಯಿಂದ ಜನ ಕಷ್ಟ ಪಡುತ್ತಿದ್ದಾರೆ. 45 ವರ್ಷದಲ್ಲಿ ಇಲ್ಲದ ನಿರುದ್ಯೋಗ ಇವತ್ತು ಸೃಷ್ಠಿ ಆಗಿದೆ. 70 ಕೋಟಿ ಜನ ನಿರುದ್ಯೋಗಿಗಳಾಗಿದ್ದಾರೆ. ಕೇಂದ್ರದಲ್ಲಿ 30 ಲಕ್ಷ ಉದ್ಯೋಗ ಖಾಲಿ ಆಗಿದೆ ಪ್ರಧಾನಿ ಮೋದಿ ದೊಡ್ಡ ದೊಡ್ಡ ಮಾತನಾಡಿ, ಕೊಟ್ಟ ಭರವಸೆ ಈಡೇರಿಕೆಗೆ ಮಾಡದೆ ಮೋಸ ಮಾಡ್ತಿದ್ದಾರೆ. ಪ್ರಧಾನಿ ಮೋದಿ ದೇಶದ ಆಸ್ತಿಯನ್ನ ಬಂಡವಾಳ ಶಾಯಿಗಳಿಗೆ ಮಾರುತ್ತಿದ್ದಾರೆ. ನಮ್ಮ ರೈತರ ಸಾಲ ಮನ್ನ ಮಾಡಲ್ಲ, ಬಂಡವಾಳ ಶಾಯಿಗಳ ಸಾಲ ಮನ್ನಾ ಮಾಡಿದ್ದಾರೆ ಅಂತ ಕಿಡಿ ಕಾರಿದ್ರು ಪ್ರಿಯಾಂಕಾ.
ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶದ ನಂತರ ಬೆಂಗಳೂರಿಗೆ ಆಗಮಿಸಿದ ಪ್ರಿಯಾಂಕಾ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಅಬ್ಬರದ ಪ್ರಚಾರ ನಡೆಸಿದ್ರು. HSR ಲೇಔಟ್ ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ ಇಲ್ಲೂ ಸಹ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ರು ಕಾಂಗ್ರೆಸ್ ಪಕ್ಷದ ಬ್ಯಾಂಕ್ ಅಕೌಂಟ್ ಸೀಜ್ ಮಾಡ್ತಾರೆ, ಇಬ್ಬರು ಸಿಎಂಗಳನ್ನ ಅರೆಸ್ಟ್ ಮಾಡಿದ್ದಾರೆ.
ಚುನಾವಣಾ ಬಾಂಡ್ ದುರ್ಬಳಕೆ ಮಾಡಿದ್ದಾರೆ ಮೋದಿ ತಮ್ಮ ಭ್ರಷ್ಟಾಚಾರ ಮುಚ್ಚಿ ಹಾಕಲು ವಿಪಕ್ಷಗಳ ನಾಯಕರನ್ನ ಭ್ರಷ್ಟರು ಎಂದು ಕರೆಯುತ್ತಾರೆ. ಧರ್ಮ, ಜಾತಿ ವಿಚಾರ ಮಾತ್ನಾಡಿ, ಭ್ರಷ್ಟಾಚಾರ ಮರೆ ಮಾಚುತ್ತಾರೆ. ನಾವು 5 ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ಕೊಟ್ಟು ದೊಡ್ಡ ಬದಲಾವಣೆ ತಂದಿದ್ದೇವೆ, ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ BPL ಕಾರ್ಡ್ ಮಹಿಳೆಯರಿಗೆ 1 ಲಕ್ಷ ನೀಡ್ತೇವೆ. ಸರ್ಕಾರಿ ಉದ್ಯೋಗ 50% ಮಹಿಳೆಯರಿಗೆ ಮೀಸಲು. SC-ST ಸಮಾಜಕ್ಕೆ ವಿಶೇಷ ಬಜೆಟ್ ಮಾಡುತ್ತೇವೆ, ರೈತರಿಗಾಗಿ ಕನಿಷ್ಠ ಬೆಂಬಲ ಬೆಲೆ ಅವರಿಗೆ ಹಕ್ಕು ಎಂದು ಕೊಡುತ್ತೇವೆ. ನಮ್ಮ ಸಂವಿಧಾನದ ರಕ್ಷಣೆ, ರೈತರ ರಕ್ಷಣೆ ನಿಮ್ಮ ಮತದಿಂದ ಮಾತ್ರ ಸಾಧ್ಯ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಂತ ಮನವಿ ಮಾಡಿದ್ರು ಪ್ರಿಯಾಂಕಾ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಮೆಗಾ ರೋಡ್ ಶೋ ನಡೆಸಿ ಮತಭೇಟೆ ನಡೆಸಿದ್ರು. ಬೊಮ್ಮನಹಳ್ಳಿಯ ಸ್ವಾಮಿ ವಿವೇಕಾನಂದ ಸರ್ಕಲ್ ನಿಂದ ಸೆಂಟ್ ಫ್ರಾನ್ಸಿಸ್ ಸ್ಕೂಲ್ ವರೆಗೆ ಸುಮಾರು 2.5 ಕಿಲೋಮೀಟರ್ ನಷ್ಟು ಮೆಗಾ ರೋಡ್ ಶೋ ನಡೆಸಿದ್ರು ಅಮಿತ್ ಶಾ. ಈ ವೇಳೆ ಮಾತಾನಾಡಿದ ಶಾ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ರು ಸಿದ್ದರಾಮಯ್ಯ ಸರ್ಕಾರ 5 ಉಚಿತ ಯೋಜನೆಗಳನ್ನು ಕೊಟ್ಟು ರಾಜ್ಯವನ್ನು ಆರ್ಥಿಕವಾಗಿ ದಿವಾಳಿಯನ್ನಾಗಿ ಮಾಡಿದ್ದಾರೆ.
ಜನ ಬರದಿಂದ ತತ್ತರಿಸಿ ಹೋಗಿದ್ದಾರೆ ಕುಡಿಯಲು ನೀರಿಲ್ಲ ಅಭಿವೃದ್ಧಿ ಕೆಲಸಗಳೆಲ್ಲಾ ನಿಂತುಹೋಗಿವೆ. ಕಾಂಗ್ರೆಸ್ ಮುಸ್ಲಿಂ ತುಷ್ಠೀಕರಣ ಮಾಡ್ತಿದೆ, ಬಾಂಬ್ ಬ್ಲಾಸ್ಟ್ ಆಗ್ತಿವೆ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಕೇಂದ್ರದ ಕಾಂಗ್ರೆಸ್ ನಾಯಕರೆಲ್ಲಾ ಬೇಲ್ ಮೇಲೆ ಹೊರಗಿದ್ದಾರೆ ಅವರಲ್ಲಿ ನಾಯಕತ್ವ ಇಲ್ಲ. ಅಭಿವೃದ್ಧಿ ಅಂದ್ರೆ ಮೋದಿ ಕಳೆದ 10 ವರ್ಷಗಳಲ್ಲಿ ಮೋದಿ ಭಾರತವನ್ನು 5ನೇ ಶ್ರೀಮಂತ ರಾಷ್ಟವಾಗಿ ಮಾಡಿದ್ದಾರೆ ಅದ್ರಿಂದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಂತ ಮನವಿ ಮಾಡಿದ್ರು ಅಮಿತ್ ಶಾ.