ಬೆಂಗಳೂರು: ಈ ವರ್ಷದ ಸಿಇಟಿ ಪರೀಕ್ಷೆ ಭಾರಿ ಗೊಂದಲದ ಗೂಡಾಗಿತ್ತು. ಕೆಇಎಯ ಎಡವಟ್ಟನಿಂದ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳು ಬಿರುಗಾಳಿಯಂತೆ ಸದ್ದು ಮಾಡಿತ್ತು. ಇದೀಗ ಅದ್ಕೆಲ್ಲ ಫುಲ್ ಸ್ಟಾಪ್ ಇಡಲಾಗಿದೆ. 3.46 ಲಕ್ಷ ಮಕ್ಕಳು ಹಾಗೂ ಲಕ್ಷಾಂತರ ಪಾಲಕರಲ್ಲಿ ಮಡುವುಗಟ್ಟಿದ ಆತಂಕಕ್ಕೆ ರಿಲೀಫ್ ನೀಡಿದೆ.
ಎಸ್.. ಈ ಬಾರಿಯ ಸಿಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಕೇವಲ ಸಂಘಟನೆಗಳು ಮಾತ್ರವಲ್ಲ ಪೋಷಕ ವಲಯ, ವಿದ್ಯಾರ್ಥಿಗಳಲ್ಲಿ ಭಾರಿ ಆತಂಕ ಮೂಡಿತ್ತು. ಪರೀಕ್ಷೆ ನಡೆದ ದಿನದಿಂದಲೂ KEA ವಿರುದ್ಧ ಅಪಸ್ವರ ಕೇಳಿ ಬಂದಿತ್ತು.. ಒಂದಲ್ಲ ಎರಡಲ್ಲ ಬರೋಬ್ಬರಿ 50ಕ್ಕೂ ಹೆಚ್ಚು ಪ್ರಶ್ನೆಗಳು ಔಟ್ ಆಫ್ ಸಿಲೆಬಸ್ ಕೇಳಿದಕ್ಕೆ ವಿದ್ಯಾರ್ಥಿಗಳ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ.
CET ಪರೀಕ್ಷೆಯಲ್ಲಿ ಕೇಳಲಾದ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳನ್ನು ಹೊರತುಪಡಿಸಿ, ಉಳಿದ ಪ್ರಶ್ನೆಗಳನ್ನು ಪರಿಗಣಿಸಿ ವಿದ್ಯಾರ್ಥಿಗಳಿಗೆ ಅಂಕ ನೀಡಲಾಗುತ್ತದೆ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಇಟಿ ಮರುಪರೀಕ್ಷೆಯನ್ನು ನಡೆಸುವುದಿಲ್ಲ.
ಈ ವರ್ಷದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಬರೋಬ್ಬರಿ 50 ಪಠ್ಯತರ ಪ್ರಶ್ನೆಗಳನ್ನು ಕೇಳಿರುವುದು ತಜ್ಞರ ಸಮಿತಿ ವರದಿಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪಠೇತರ ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳನ್ನು ಮಾತ್ರ ಮೌಲ್ಯ ಮಾಪನಕ್ಕೆ ಪರಿಗಣಿಸಿ ಅದರ ಫಲಿತಾಂಶ ಆಧರಿಸಿ ಅಂಕ ನೀಡಲು ಮುಂದಾಗಿದೆ.
ಇನ್ನು ಭೌತಶಾಸ್ತ್ರದಲ್ಲಿ 9, ರಸಾಯನಶಾಸ್ತ್ರದಲ್ಲಿ 15, ಗಣಿತದಲ್ಲಿ 15, ಜೀವಶಾಸ್ತ್ರದಲ್ಲಿ 11 ಪ್ರಶ್ನೆಗಳನ್ನು ಪಠ್ಯಕ್ರಮದ ಹೊರತಾಗಿ ಪರೀಕ್ಷೆಯಲ್ಲಿ ಕೇಳಲಾಗಿತ್ತು. ಹೀಗಾಗಿ ಈ ಪ್ರಶ್ನೆಗಳನ್ನು ಪರಿಗಣಿಸುತ್ತಿಲ್ಲ. ಆದರೆ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎರಡು ತಪ್ಪಾದ ಪ್ರಶ್ನೆಗಳಿಗೆ ಮಾತ್ರ ಅಂಕಗಳನ್ನು ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಒಟ್ಟಾರೆಯಾಗಿ ಹಲವು ಗೊಂದಲ ಅಡೆತಡೆಗಳ ನಡುವೆ cet ಪರಿಕ್ಶೆಯಲ್ಲಿ ಕೇಳಿದ್ದ ಔಟ್ ಆಫ್ ಸಿಲಾಬಸ್ ಪ್ರಶ್ನೆಗಳ ಸಂಪೂರ್ಣ ಆಮ್ಕಾ ನೀಡಲು ಮುಂದಾಗಿದೆ. ಇದರಿಂದ ವಿದ್ಯಾರ್ಥಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.