ಬೆಂಗಳೂರು: ಕಳೆದ ಭಾನುವಾರ ಲೂಲು ಮಾಲ್ ನಲ್ಲಿ ವ್ಯಕ್ತಿಯೊಬ್ಬ ಯುವತಿ ಮೈಮುಟ್ಟಿ ವಿಕೃತಿ ಮೆರೆದಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು, ಮಾಲ್ ಗೆ ಇದೇ ಕೆಲಸಕ್ಕೆ ಕೆಲ ಕಾಮುಕರು ಬರ್ತಾರೆ ಅನ್ನೋದು ಕನ್ಫರ್ಮ್ ಆಗಿತ್ತು, ವಿಡಿಯೋವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ ಮಾಲ್ ಮ್ಯಾನೇಜರ್ ಕಡೆಯಿಂದ ಕೇಸ್ ಪಡೆದು ತನಿಖೆಗೆ ಇಳಿದಿದೆ. ಈ ಮಧ್ಯೆ ಯುವತಿ ದೇಹವನ್ನ ವಿಕೃತವಾಗಿ ಮುಟ್ಟಿದ್ದ ಅಂಕಲ್ ಯಾರೂ ಅನ್ನೋದು ಪತ್ತೆಯಾಗಿದೆ.
ದುರಂತ ಅಂದ್ರೆ ದಶಕಗಳಕಾಲ ಮಕ್ಕಳಿಗೆ ಪಾಠ ಮಾಡಿದ್ದ ಮೆಷ್ಟ್ರೇ ಈ ವಿಕೃತಿ ಮೆರೆದಿದ್ದಾನೆ. ಅಗ್ರಹಾರ ದಾಸರಹಳ್ಳಿಯ ನಿವೃತ್ತಿ ಮುಖ್ಯ ಶಿಕ್ಷಕ ಅಶ್ವತ್ ನಾರಯಣ ಅನ್ನೋದು ಪೊಲೀಸ್ರಿಗೆ ಕನ್ಪರ್ಮ್ ಆಗಿದೆ. ಆದ್ರೆ ವಿಷಯ ಗೊತ್ತಾಗ್ತಿದ್ದಂತೆ ಮೇಷ್ಟ್ರು ಮನೆ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಶಿವನಹಳ್ಲಿ ಬಳಿಬಿರೋ ಮಠದ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕನಾಗಿ ನಿವೃತ್ತಿಯಾಗಿರೋ ಅಶ್ವತನಾರಯಣ ಸದ್ಯ ನಿವೃತ್ತಿ ಜೀವನ ನಡೆಸ್ತಿದ್ದಾರೆ. ತುಂಬು ಕುಟುಂಬದಲ್ಲಿ ಇದ್ರು ಹಳೇ ಮೇಷ್ಟ್ರು ಇಂಥಹ ಕುಕೃತ್ಯಕ್ಕೆ ಕೈ ಹಾಕಿ ತಲೆ ಮರೆಸಿಕೊಂಡಿರೋದು ವಿಪರ್ಯಾಸ.