ಟೆಲ್ ಅವೀವ್: ಯುದ್ಧ ಪೀಡಿತ ಇಸ್ರೇಲ್ನಿಂದ (Israel) ಭಾರತೀಯರನ್ನು (India) ಹೊತ್ತ ಮೂರನೇ ವಿಮಾನ ನವದೆಹಲಿಗೆ ಹೊರಟಿದೆ ಎಂದು ಭಾರತೀಯ ರಾಯಭಾರ ಕಚೇರಿ ಶನಿವಾರ ತಿಳಿಸಿದೆ. 197 ಜನರನ್ನು ವಿಮಾನ ಹೊರಟಿದೆ ಎಂದು ಇಸ್ರೇಲ್ನಲ್ಲಿರುವ ರಾಯಭಾರ ಕಚೇರಿ ಮಾಹಿತಿ ನೀಡಿದೆ.
`ಆಪರೇಷನ್ ಅಜಯ್’ (Operation Ajay) ಅಡಿಯಲ್ಲಿ ಇಸ್ರೇಲ್ನಿಂದ ಭಾರತೀಯರನ್ನು ಕರೆತರುವ ಕಾರ್ಯ ನಡೆಯುತ್ತಿದೆ. ಇಂದು ಬೆಳಗ್ಗೆ ಇಸ್ರೇಲ್ನ ಟೆಲ್ ಅವೀವ್ನಿಂದ 235 ಭಾರತೀಯ ಪ್ರಜೆಗಳನ್ನು ಹೊತ್ತ ಎರಡನೇ ವಿಮಾನವು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಇದಕ್ಕೂ ಮೊದಲು ಬಂದಿದ್ದ ವಮಾನದಲ್ಲಿ 230 ಜನ ಬಂದಿದ್ದರು.
ಇಸ್ರೇಲ್ನಲ್ಲಿರುವ ಸುಮಾರು 18,000 ಭಾರತೀಯರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರ ಆಪರೇಷನ್ ಅಜಯ್ನ್ನು ಪ್ರಾರಂಭಿಸಿದೆ. ಗುರುವಾರದಿಂದ ಭಾರತೀಯರ ನೋಂದಣಿ ಆರಂಭವಾಗಿದೆ. ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಭಾರತೀಯ ಕಂಪನಿಗಳಿಗೆ ನೆರವು ನೀಡುತ್ತಿದೆ. ಸಹಾಯದ ಅಗತ್ಯವಿರುವ ಭಾರತೀಯರಿಗೆ ಸಹಾಯವಾಣಿಯನ್ನು ಸ್ಥಾಪಿಸಿದೆ.