ಕೋಲಾರ: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಡಿ.ಪಿ ಹಳ್ಳಿ ಗ್ರಾಮದ ಐತಿಹಾಸಿಕ ಶ್ರೀ ಕೇದಾರನಾಥ ಸ್ವಾಮಿ ದೇಗುಲದಲ್ಲಿ ಇದ್ದಕ್ಕಿದ್ದಂತೆ ದೇವರ ಪ್ರತಿಮೆಗೆ ಇದ್ದ ತ್ರಿಶೂಲ ಕೆಳಗೆ ಬಿದ್ದಿದೆ.
ಶ್ರೀ ಕೇದಾರನಾಥ ಸ್ವಾಮಿ ದೇಗುಲದ ಗರ್ಭಗುಡಿಯಲ್ಲಿ ನಡೆದಿರುವ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗುತ್ತಿದೆ. ಗರ್ಭಗುಡಿಯಲ್ಲಿ ಯಾರೂ ಇಲ್ಲದಿದ್ದರೂ ಸಹ ದೇವರ ಪ್ರತಿಮೆಯಿಂದ ತ್ರಿಶೂಲ ಕೆಳಗೆ ಬಿದ್ದಿರುವ ಘಟನೆ ಪವಾಡ ಎಂಬಂತೆ ಭಕ್ತ ವಲಯದಲ್ಲಿ ವೈರಲ್ ಆಗುತ್ತಿದೆ.