ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನ್ಯೂಮೋನಿಯಾ ಆತಂಕ ಹೆಚ್ಚಾಗಿದೆ. ಕಳೆದ ಎರಡು ವಾರದಿಂದ ನಗರದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ವೈರಲ್ ನ್ಯುಮೋನಿಯಾ ಹೆಚ್ಚಾಗಿದೆ. ಆಸ್ಪತ್ರೆಗಳಲ್ಲಿ ದಿನಕ್ಕೆ ಮೂರರಿಂದ ನಾಲ್ಕು ವೈರಲ್ ನ್ಯುಮೋನಿಯಾ ಕೇಸ್ಗಳು ದಾಖಲಾಗುತ್ತಿವೆ. ರಾಜಧಾನಿಯಲ್ಲಿ ಸುಮಾರು 25 ರಿಂದ 30 ಮಕ್ಕಳಲ್ಲಿ ನ್ಯುಮೋನಿಯಾ ಪತ್ತೆಯಾಗುತ್ತಿದೆ.
ಜೊತೆಗೆ 1-15 ವರ್ಷದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಾಗಿವೆ. ಪ್ರತಿ ದಿನ ಚೀನಾ, ಅಮೇರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ 3ರಿಂದ14 ವರ್ಷ ವಯಸ್ಸಿನ ಮಕ್ಕಳಲ್ಲಿ ಏಕಾಏಕಿ ಭಾರೀ ಪ್ರಮಾಣದಲ್ಲಿ ನ್ಯುಮೋನಿಯಾ ಸೋಂಕು ಪತ್ತೆಯಾಗುತ್ತಿದೆ. ಚೀನಾದಲ್ಲೂ ಎಳೆಯ ವಯಸ್ಸಿನ ಮಕ್ಕಳಲ್ಲಿ ಇದೇ ರೀತಿಯಲ್ಲಿ ನ್ಯುಮೋನಿಯಾ ಮಾದರಿಯ ನಿಗೂಢ ಸೋಂಕು ಕಾಣಿಸಿಕೊಂಡಿದೆ.
ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಾಂಕ್ರಾಮಿಕ ಏಳುವ ಭೀತಿ ಎದುರಾಗಿದ್ದು ಬೆಂಗಳೂರಿನ ಮಕ್ಕಳಲ್ಲೂ ಉಸಿರಾಟದ ಸಮಸ್ಯೆ ಕಂಡು ಬರುತ್ತಿದೆ. ಹೀಗಾಗಿ ಎಚ್ಚರಿಕೆಯಿಂದ ಇರಲು ಪೋಷಕರಿಗೆ ಸೂಚನೆ ನೀಡಲಾಗಿದೆ. ಜ್ವರ, ಕೆಮ್ಮು, ಸುಸ್ತು, ಉಸಿರಾಟದ ಸಮಸ್ಯೆ ಕಂಡು ಬಂದರೆ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ.
ಸಿಲಿಕಾನ್ ಸಿಟಿಯ ಆಸ್ಪತ್ರೆಗಳ ಸ್ಥಿತಿ ಹೇಗಿದೆ..?
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ
ರೆಸ್ಪಿರೇಟರಿ ಕೇಸ್ ಶೇಕಾಡ 20% ಹೆಚ್ಚಳ
ನ್ಯೂಮೋನಿಯಾ ಕೇಸ್ 20% ಹೆಚ್ಚಳ
8 ರಿಂದ 10 ವರ್ಷದ ಮಕ್ಕಳಲ್ಲಿ ವೈರಲ್ ನ್ಯೂಮೋನಿಯಾ ಕೇಸ್
ಪ್ರತಿ ದಿನ 5 ರಿಂದ 6 ಹೊಸ ಕೇಸ್ ದಾಖಲು
ಕೆ.ಸಿಜನರಲ್ ಆಸ್ಪತ್ರೆ ಆಸ್ಪತ್ರೆ, ಮಲ್ಲೇಶ್ವರಂ
ರೆಸ್ಪಿರೇಟರಿ ಕೇಸ್ ಶೇಕಾಡ 30% ಹೆಚ್ಚಳ
ನ್ಯೂಮೋನಿಯಾ ಕೇಸ್ 25% ಹೆಚ್ಚಳ
8 ರಿಂದ 15 ವರ್ಷದ ಮಕ್ಕಳಲ್ಲಿ ವೈರಲ್ ನ್ಯೂಮೋನಿಯಾ ಕೇಸ್
ಪ್ರತಿ ದಿನ 5 ರಿಂದ 6 ಹೊಸ ಕೇಸ್ ದಾಖಲು
ರೈನ್ಬೋ ಚಿಲ್ಡ್ರನ್ ಆಸ್ಪತ್ರೆ
ರೆಸ್ಪಿರೇಟರಿ ಕೇಸ್ ಶೇಕಾಡ 25 % ಹೆಚ್ಚಳ
ನ್ಯೂಮೋನಿಯಾ ಕೇಸ್ 20% ಹೆಚ್ಚಳ
8 ರಿಂದ 15 ವರ್ಷದ ಮಕ್ಕಳಲ್ಲಿ ವೈರಲ್ ನ್ಯೂಮೋನಿಯಾ ಕೇಸ್
ಪ್ರತಿ ದಿನ 5 ರಿಂದ 6 ಹೊಸ ಕೇಸ್ ದಾಖಲು
ಜಯನಗರ ಸಾರ್ವಜನಿಕ ಆಸ್ಪತ್ರೆ
ಪ್ರತಿ ದಿನ ಒಪಿಡಿಗೆ 100ಕ್ಕೂ ಹೆಚ್ಚು ಮಕ್ಕಳು ಬರ್ತಿದ್ದಾರೆ
ಡೆಂಘೀ 2 ರಿಂದ 3 ಕೇಸ್ ಪಾಸಿಟಿವ್ ಬರ್ತಿದೆ
ನ್ಯೂಮೋನಿಯಾ ಕೇಸ್ 5% ಹೆಚ್ಚಳ
ಬೌರಿಂಗ್ ಆಸ್ಪತ್ರೆ
ರೆಸ್ಪಿರೇಟರಿ ಕೇಸ್ ಶೇಕಾಡ 15% ಹೆಚ್ಚಳ
ನ್ಯೂಮೋನಿಯಾ ಕೇಸ್ 10% ಹೆಚ್ಚಳ
8 ರಿಂದ 15 ವರ್ಷದ ಮಕ್ಕಳಲ್ಲಿ ವೈರಲ್ ನ್ಯೂಮೋನಿಯಾ ಕೇಸ್
ಪ್ರತಿ ದಿನ 2 ರಿಂದ 4 ಹೊಸ ಕೇಸ್ ದಾಖಲು