ಮಂಡ್ಯ:- ಭಾರೀ ಮಳೆಯಿಂದ ಕಾವೇರಿ ಒಡಲು ತುಂಬಿಸಿಕೊಳ್ಳುತ್ತಿದ್ದಾಳೆ. ಮಳೆಯಿಂದಾಗಿ ಕೆಆರ್ಎಸ್ ಡ್ಯಾಂಗೆ 36,674 ಕ್ಯೂಸೆಕ್ ಒಳಹರಿವು ಹರಿದುಬಂದಿದೆ. ಕ್ಷಣ ಕ್ಷಣಕ್ಕೂ ಕೆಆರ್ಎಸ್ ಡ್ಯಾಂನ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಸದ್ಯ 110.60 ಅಡಿಗೆ ಕೆಆರ್ಎಸ್ ಡ್ಯಾಂನ ನೀರಿನ ಮಟ್ಟ ತಲುಪಿದೆ.
24 ಗಂಟೆಯಲ್ಲಿ 3 ಅಡಿ ನೀರು ಹೆಚ್ಚಳವಾಗಿದೆ. ನಿನ್ನೆ 107.60 ಅಡಿ ಇದ್ದ ಕೆಆರ್ಎಸ್ ನೀರಿನ ಮಟ್ಟ, ಇಂದು 110.60 ಅಡಿಗೆ ತಲುಪಿದೆ.
ಕೆಆರ್ಎಸ್ ಡ್ಯಾಂನ ನೀರಿನ ಸಂಗ್ರಹದಲ್ಲಿ ಭಾರೀ ಏರಿಕೆ ಕಂಡಿದ್ದು, 24 ಗಂಟೆಯಲ್ಲಿ 3 ಟಿಎಂಸಿ ನೀರು ಕೆಆರ್ಎಸ್ಗೆ ಹರಿದು ಬಂದಿದೆ.
ನಿನ್ನೆ ಕೆಆರ್ಎಸ್ನಲ್ಲಿ 29.378 ಟಿಎಂಸಿ ನೀರು ಸಂಗ್ರವಾಗಿತ್ತು. ಇಂದು 32.330 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯ ಕೆಆರ್ಎಸ್ ಡ್ಯಾಂ ಭರ್ತಿಯಾಗುವ ಹಂತದಲ್ಲಿದೆ. ಸದ್ಯ ಈ ವಿಚಾರವಂತೂ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಇಂದಿನ ಕೆಆರ್ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 110.60 ಅಡಿ.
ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
ಇಂದಿನ ಸಾಮರ್ಥ್ಯ – 32.330 ಟಿಎಂಸಿ
ಒಳ ಹರಿವು – 36,674 ಕ್ಯೂಸೆಕ್
ಹೊರ ಹರಿವು – 2,361 ಕ್ಯೂಸೆಕ್