ಚಿಕ್ಕಬಳ್ಳಾಪುರ ;– ಟೊಮೆಟೊ ತೋಟಕ್ಕೆ ಸರ್ಕಾರಿ ಬೋರ್ ವೇಲ್ ದುರ್ಬಳಕೆ ಮಾಡಿಕೊಂಡ ವಾಟರ್ ಮ್ಯಾನ್ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಕಾನಗಮಾಕಲಪಲ್ಲಿ ಗ್ರಾಮ ಪಂಚಾಯಿತಿಯ ವಾಟರ್ ಮನ್ ಶ್ರೀರಾಮನಾಯಕ್ ಎನ್ನುವವರು ಸರ್ಕಾರಿ ಬೋರ್ ವೆಲ್ ನೀರನ್ನ ತನ್ನ ಜಮೀನಿಗೆ ಹರಿಸಿಕೊಂಡು ಟೊಮೆಟೊ ಬೆಳೆಯುತ್ತಿದ್ದಾರೆ. ಇತ್ತ ಗ್ರಾಮದ ನಲ್ಲಿಯಲ್ಲಿ ನೀರು ಯಾಕೆ ಬರುತ್ತಿಲ್ಲ ಅಂತ ವಿಚಾರಿಸಿದಾಗ ವಾಟರ್ ಮ್ಯಾನ್ನ ಅಸಲಿ ಕರಾಮತ್ತು ಬಯಲಾಗಿದೆ.
ಕಾನಗಮಾಕಲಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂರಗಮಾಕಲಪಲ್ಲಿ ಗ್ರಾಮಕ್ಕೆ ಒಂದು ವಾರದಿಂದ ನೀರು ಪೂರೈಕೆಯಾಗಿಲ್ಲ. ಇದರಿಂದ ಗ್ರಾಮದ ಮಹಿಳೆಯರು ಗ್ರಾಮ ಹೊರವಲಯದ ಕಿಲೋಮೀಟರ್ ದೂರ ಸಾಗಿ ಖಾಸಗಿ ಬೋರ್ ವೆಲ್ಗಳಿಂದ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಿ ಬೋರ್ ವೇಲ್ನಿಂದ ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿಲ್ಲ ಅಂತ ಕೇಳಿದ ಗ್ರಾಮಸ್ಥರಿಗೆ ವಾಟರ್ ಮ್ಯಾನ್ ಶ್ರೀರಾಮನಾಯಕ್ ಧಮ್ಕಿ ಹಾಕ್ತಿದ್ದಾನಂತೆ. ಇದರಿಂದ ರೋಸಿಹೋದ ಗ್ರಾಮಸ್ಥರು ಶ್ರೀರಾಮನಾಯಕ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.