ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಮನೆಯ ಪಕ್ಕದಲ್ಲೇ ವಾಸವಾಗಿರುವ ಗರ್ಭಿಣಿ (Rape on Pregnant) ಮೇಲೆ ಅತ್ಯಾಚಾರವೆಸಗಿದ್ದು, ಇದಕ್ಕೆ ಆತನ ಪತ್ನಿಯೂ ಸಾಥ್ ನೀಡಿರುವ ವಿಲಕ್ಷಣ ಘಟನೆಯೊಂದು ಒಡಿಶಾದ ನಬರಂಗಪುರ ಜಿಲ್ಲೆಯಲ್ಲಿ ನಡೆದಿದೆ.
ಅತ್ಯಾಚಾರವೆಸಗಿದ ಬಳಿಕ ದಂಪತಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಸ್ಥಳೀಯ ದೇವಸ್ಥಾನಕ್ಕೆ ಕರೆದೊಯ್ದು ಘಟನೆಯನ್ನು ಯಾರಿಗೂ ವಿವರಿಸದಂತೆ ಆಣೆ ಪ್ರಮಾಣ ಮಾಡಿಸಿದ್ದಾರೆ. ಆದರೆ ಮಹಿಳೆ ಪೊಲೀಸರಿಗೆ ಈ ಬಗ್ಗೆ ದೂರು ನಿಡಿದ್ದು, ಸದ್ಯ ಆರೋಪಿ ಹಾಗೂ ಆತನ ಪತ್ನಿಯನ್ನು ಬಂಧಿಸಲಾಗಿದೆ.
ನಡೆದಿದ್ದೇನು..?: ಜಗನ್ನಾತ್ಪುರ ಗ್ರಾಮದ ಖಾಟಿಗುಡ್ಡ ಪ್ರದೇಶದ ನಿವಾಸಿಯಾಗಿರುವ ಗರ್ಭಿಣಿ, ಪದ್ಮ ರುಂಜಿಕರ್ ಅವರ ಬಳಿ ರೆಗ್ಯಲುರ್ ಚೆಕಪ್ ಮಾಡಿಸಿಕೊಳ್ಳುತ್ತಿದ್ದರು. ಅಂತೆಯೇ ಇತ್ತೀಚೆಗೆ ಕೂಡ ಸಂತ್ರಸ್ತೆ ಚೆಕಪ್ಗೆಂದು ತೆರಳಿದ್ದರು. ಈ ವೇಳೆ ಪದ್ಮ ಅವರ ಪತಿ ಗರ್ಭಿಣಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪತಿಗೆ ಪತ್ನಿ ಪದ್ಮ ರುಂಜಿಕರ್ ಕೂಡ ಸಹಾಯ ಮಾಡಿದ್ದಾಳೆ. ಅಲ್ಲದೆ ಪತಿ ರೇಪ್ ಮಾಡುತ್ತಿರುವುದನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾಳೆ. ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.
ಈ ಬಗ್ಗೆ ಸಂತ್ರಸ್ತೆ ದೂರು ನೀಡಿದ ಕೂಡಲೇ ಪೊಲೀಸರು ದಂಪತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವೈಯಕ್ತಿಕ ಕಾರಣದಿಂದಲೇ ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಮಹಿಳೆಯಿಂದ ಮೊಬೈಲ್ ಫೋನ್ (Mobile Phone) ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ.