ಬೆಂಗಳೂರು: ಆತ ವಿದ್ಯಾವಂತಾ.ಚನ್ನಾಗಿ ಓದ್ಕೊಂಡಿದ್ದ.ಒಂದೊಳ್ಳೆ ಕಡೆ ಕೆಲಸನೂ ಸಿಕ್ಕಿತ್ತು.ಆದ್ರೆ ಆತನಿಗಿದ್ದ ಆ ಚಟ ಇವತ್ತು ಜೈಲು ಸೇರುವಂತೆ ಮಾಡಿದೆ.ಸ್ನಾನ ಮಾಡ್ತಿದ್ದ ಮಹಿಳೆಯರನ್ನ ಇಣಿಕಿ ಇಣುಕಿ ನೋಡ್ತಾ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಳ್ತಿದ್ದವನಿಗೆ ಯುವತಿಯರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ.ಹೀಗೆ ಪಿಜಿಯಲ್ಲಿದ್ದ ಯುವತಿಯರನ್ನ ಕಾಡ್ತಿದ್ದ ಆದ್ರೆ ಕೊನೆಗೂ ವಿಕೃತ ಕಾಮಿ ಖಾಕಿ ಕೈಗೆ ಸಿಕ್ಕಿಬಿದಿದಾನೆ..
ಹೌದು..ಹೀಗೆ ಮಹಿಳೆಯರ ನಿದ್ದೆ ಕೆಡಿಸಿದ್ದ ಕಾಮುಕನ ಹೆಸರು ಅಶೋಕ್.ಚಿಕ್ಕ ಬಳ್ಳಾಪುರದ ಅಶೋಕ್ ಎಂಎಸ್ಸಿ ಓದ್ತಾ ಇದ್ದ.ಜೊತೆಗೆ ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡ್ತಿದ್ದ.ಕಳೆದ ಕೆಲ ವರ್ಷಗಳಿಂದ ಹೂಡಿ ತಿಗಳರ ಪಾಳ್ಯದಲ್ಲಿರುವ ಪಿಜಿಯಲ್ಲಿ ಬಂದು ನೆಲೆಸಿದ್ದ.ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಇದ್ದಿದ್ದಿದ್ರೆ ಇವತ್ತು ಜೈಲು ಸೇರೊ ಗತಿ ಬರ್ತಾ ಇರ್ಲಿಲ್ಲ.ಈ ಪಾಪಿ ಪಿಜಿ ಎದುರಿರುವ ಲೇಡಿಸ್ ಪಿಜಿ ಮೇಲೆ
ಕಣ್ಣಾಕಿದ್ದ.ಅದ್ರಲ್ಲೂ ಮಹಿಳೆಯರ ಸ್ನಾನದ ಕೋಣೆಯನ್ನೆ ಟಾರ್ಗೆಟ್ ಮಾಡ್ತಿದ್ದ.ಪಿಜಿ ನಲ್ಲಿರೊ ಯುವತಿಯರು ಸ್ನಾನಕ್ಕೆ ಬರ್ತಾ ಇದ್ದಂತೆ ಆ್ಯಕ್ಟಿವ್ ಆಗಿ ಬಿಡ್ತಿದ್ದ.ಯುವತಿಯರ ಸ್ನಾನದ ವಿಡಿಯೋ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದುಕೊಳ್ತಿದ್ದ.ಇದೇ ರೀತಿ ಜೂನ್ 21 ರಂದು ಯುವತಿಯರ ಸ್ನಾಮದ ವಿಡಿಯೋ ಚಿತ್ರೀಕರಿಸ್ತಿದ್ದಂತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ.ತಕ್ಷಣ ಆರೋಪಿಯನ್ನ ಮಹದೇವಪುರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿತ್ತು
ಆರೋಪಿಯನ್ನ ಬಂಧಿಸಿದ ಮಹದೇವಪುರ ಪೊಲೀಸರು ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ರು.ಈ ವೇಳೆ ಗೊತ್ತಾಗಿದ್ದೇ ನೋಡಿ ಬೆಚ್ಚಿ ಬೀಳೋ ಸಂಗತಿ.ಯಾಕಂದ್ರೆ ಆರೋಪಿ ಅಶೋಕ್ ಮೊಬೈಲ್ ನಲ್ಲಿ ಯುವತಿಯರ ಏಳು ಸ್ನಾನದ ವಿಡಿಯೋಗಳು ಪತ್ತೆಯಾಗಿದೆ.ಸದ್ಯ ಆ ವಿಡಿಯೋ ಗಳನ್ನ ಡಿಲಿಟ್ ಮಾಡಲಾಗಿದ್ದು ಮತ್ತೆಲ್ಲಾದ್ರು ಸೇವ್ ಮಾಡಿ ಇಟ್ಟುಕೊಂಡಿದ್ದಾನಾ ಅನ್ನೋ ಭಯ ಯುವತಿಯರಲ್ಲಿ ಮನೆ ಮಾಡಿದೆ.ಇದು ಒಂದು ಕಡೆಯಾದ್ರೆ ಆರೋಪಿ ಆ ವಿಡಿಯೋ ನೋಡಿ ವಿಕೃತ ಸುಖ ಅನಹಭವಿಸ್ತಿದ್ದನಾ? ಅಥವಾ ಬ್ಲಾಕ್ ಮೇಲ್ ಮಾಡಲು ಉಪಯೋಗಿಸ್ತಿದ್ನಾ ಅನ್ನೋ ವಿಚಾರ ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ
ಕಾಮಕನ ಬಂಧನ ದಿಂದ ನಲುಗಿದ್ದ ಪಿಜಿ ಯುವತಿಯರು ನಿಟ್ಟುಸಿರು ಬಿಡುವಂತಾಗಿದೆ.ನೀವು ಯಾವ್ದಕ್ಕೂ ಹುಷಾರಾಗಿರಿ.ಯಾಕಂದ್ರೆ ನಿಮ್ಮ ಸುತ್ತಾಮುತ್ತಾ ಕೂಡ ಇಂತಹ ಕಾಮುಕರು ಇರಬಹುದು. ಬಿ ಅಲರ್ಟ್..