ವಿಶ್ವವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ದಿನಗಣನೆಗಳು ಶುರುವಾಗಿವೆ.2024ರ ದಸರಾ ಚಟುವಟಿಗಳ ಸಿದ್ದತೆ ಈಗಾಗಲೇ ಆರಂಭಗೊಂಡಿದ್ದು, ದಸರಾಗೆ ಅಕ್ಟೋಬರ್ 3ರಂದು ಚಾಲನೆ ಸಿಗಲಿದೆ.
ದಸರಾ ಉದ್ಘಾಟಕರಾಗಿ ಸಾಹಿತಿ ಹಂ.ಪ.ನಾಗರಾಜಯ್ಯ ನೇಮಕ ದಸರಾ ಉದ್ಘಾಟಕರಾಗಿ ಹಂಪನಾ ನೇಮಿಸಿದ ರಾಜ್ಯ ಸರ್ಕಾರ ಅಕ್ಟೋಬರ್ 3ರಂದು ಮೈಸೂರಿನಲ್ಲಿ ನಡೆಯುವ ದಸರಾ ಉದ್ಘಾಟನೆಯನ್ನು ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಈ ಬಾರಿ ದಸರಾ ಉದ್ಘಾಟಿಸಲಿರುವ ಸಾಹಿತಿ ಹಂ.ಪ.ನಾಗರಾಜಯ್ಯ
ಕರ್ನಾಟಕದ ನಾಡಹಬ್ಬ ಮೈಸೂರು ದಸರಾಗೆ ತನ್ನದೇ ಆದ ಇತಿಹಾಸವಿದೆ. ಮೈಸೂರು ಮಹಾರಾಜರು ಮೊದಲು 414 ವರ್ಷಗಳ ಹಿಂದೆಯೇ ದಸರಾವನ್ನು ಆರಂಭಿಸಿದ್ದು ಶ್ರೀರಂಗಪಟ್ಟಣದಲ್ಲಿ. ಅಲ್ಲಿಂದ ಮೈಸೂರಿಗೆ ದಸರಾ ಸ್ಥಳಾಂತರಗೊಂಡು ಪ್ರತಿ ವರ್ಷ ನವರಾತ್ರಿ ಹಾಗೂ ವಿಜಯದಶಮಿಗಳು ಸಡಗರದಿಂದ ನಡೆದುಕೊಂಡು ಬಂದಿವೆ. ಕೆಲವೊಮ್ಮೆ ಅರಮನೆ ಆವರಣದಲ್ಲಿ ಸೀಮಿತರಾದರೂ ಹೆಚ್ಚು ದಸರಾಗಳು ಜಂಬೂಸವಾರಿ ಮೆರವಣಿಗೆಯೊಂದಿಗೆ ಬನ್ನಿಮಂಟಪದವರೆಗೂ ಸಾಗಿದೆ. ಈ ರೀತಿಯ ದಸರಾವನ್ನು ಗಣ್ಯರೊಬ್ಬರಿಂದ ಉದ್ಘಾಟಿಸುವ ಪರಂಪರೆ ಮೂರು ದಶಕದ ಹಿಂದೆಯೇ ಆರಂಭಗೊಂಡಿದೆ