ಗಡಿ ಜಿಲ್ಲೆ ಬೀದರ್ನಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ೪೦ ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಬಿಸಿಲಿನ ಜಳಕ್ಕೆ ಜನರೇ ತತ್ತರಿಸಿ ಹೋಗುತ್ತಿದ್ದು ಇನ್ನು ಮೂಕ ಪ್ರಾಣಿಗಳ ವೇದನೆ ಹೇಲತಿರದ್ದಾಗಿದೆ. ಹೀಗಾಗಿ ಕಾಡುಪ್ರಾಣಿಗಳ ನೀರಿನ ದಾಹ ತಣಿಸಲು ಮುಂದಾಗಿರುವ ಬೀದರ್ನ ಸ್ವಾಭಿಮಾನಿ ಗೆಳೆಯರ ಬಳಗ ಮೀಸಲು ಅರಣ್ಯ ಪ್ರದೇಶದಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ನಿರುಣಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಶಹಾಪುರ, ಅಮಲಾಪುರ, ನಾಗೂರ, ನಿರ್ಣಾ ಗ್ರಾಮದ ಬಳಿಇರುವ ಮೀಸಲು ಅರಣ್ಯ ಪ್ರದೇಶದಲ್ಲಿ ಕೋತಿ, ಜಿಂಕೆ, ಉಡಾ ಸೇರಿದಂತೆ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳ ಕಂಡುಬರುತ್ತವೆ.
ಬಿಸಿಲಿನ ಧಗೆಗೆ ಬೆಂಡಾದ ಪ್ರಾಣಿಗಳು ನೀರಿಗಾಗಿ ಪರಿತಪಿಸುತ್ತವೆ. ಇದನ್ನ ಅರಿತ ಸ್ವಾಭಿಮಾನಿ ಗೆಳೆಯರ ಬಳಗವು ಕಾಡು ಪ್ರದೇಶದಲ್ಲಿ ತೊಟ್ಟಿಗಳನ್ನ ನಿರ್ಮಾಣ ಮಾಡಿದ್ದು, ಪ್ರತಿನಿತ್ಯ ಪಾಳೆ ಆಧಾರದ ಮೇಲೆ ತೊಟ್ಟಿಗಳಿಗೆ ನೀರು ಹಾಕಿ ಪ್ರಾಣಿಗಳ ನೀರಿನ ದಾಹ ತಿರಿಸುವ ಕೆಲಸಕ್ಕೆ ಮುಂದಾಗಿದ್ದು ಪ್ರಶಂಶನೀಯ ಕೆಲಸವಾಗಿದೆ. ಇನ್ನು ಈ ಕುರಿತು ಸ್ವಾಭಿಮಾನಿ ಗೆಳೆಯರ ಬಳಗದ ಸದಸ್ಯರೊಬ್ಬರು ಮಾತನಾಡಿ, ಇಲ್ಲಿ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳು ಜೀವಿಸುತ್ತವೆ.
ಬಿಸಿಲಿನ ಬೇಗೆಯಿಂದ ಮನುಷ್ಯರೇ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಇನ್ನು ಪ್ರಾಣಿಗಳಿಗೆ ಯಾವ ರೀತಿ ಸಂಕಷ್ಟ ಇರಬಹುದು ಎಂದು ಅರಿತು, ನೀರಿನ ತೊಟ್ಟಿ ನಿರ್ಮಾಣ ಮಾಡಿ ನೀರು ಹಾಕುವ ಕೆಲಸ ಮಾಡ್ತಿದ್ದೇವೆ. ಜೊತೆಗೆ ನಾವು ನೀರು ಹಾಕಿದ ಸ್ಥಳಕ್ಕೆ ಪ್ರಾಣಿಗಳು ಬರುತ್ತುವೆಯಾ ಇಲ್ಲವಾ ಎಂಬುದನ್ನ ಅರಿಯಲು ಮೊಬೈಲ್ ಇಟ್ಟು ಚಿತ್ರೀಕರಣ ಸಹ ಮಾಡ್ತೇವೆ. ಪ್ರಾಣಿಗಳು ಬಂದುನೀರು ಕುಡಿಯುವ ದೃಶ್ಯ ನೋಡಿ ಸಂತಸವಾಗುತ್ತೆ. ಇದೇ ರೀತಿ ಎಲ್ಲ ಕಡೆಗಳಲ್ಲೂ ಪ್ರಾಣಿಗಳಿಗೆ ನೀರಿನ ದಾಹ ತಣಿಸುವ ಕೆಲಸವನ್ನ ಮಾಡಬೇಕು ಎಂದು ಮನವಿ ಮಾಡಿಕೊಂಡರು.